ಖಾಸಗಿ ಬಸ್ ನಿಲ್ದಾಣದಲ್ಲಿ ರಾತ್ರೋರಾತ್ರಿ ಮಳಿಗೆ ನಿರ್ಮಾಣ, ಕಿತ್ತೊಗೆದ ಪಾಲಿಕೆ, ಒತ್ತುವರಿದಾರರ ಮೇಲೆ ಬೀಳಲಿದೆ ಕೇಸ್

 

 

ಸುದ್ದಿ ಕಣಜ.ಕಾಂ

ಶಿವಮೊಗ್ಗ: ಕೋವಿಡ್ ಹಿನ್ನೆಲೆ ನೈಟ್ ಕಫ್ರ್ಯೂ ವಿಧಿಸಲಾಗಿದೆ. ಇದರ ಲಾಭ ಪಡೆದ ಕೆಲವರು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ರಾತ್ರೋರಾತ್ರಿ ಅನಧಿಕೃತವಾಗಿ ಎರಡು ಶೆಟರ್ ಗಳನ್ನು ನಿರ್ಮಿಸಿದ್ದಾರೆ. ಈ ವಿಚಾರ ಪಾಲಿಕೆಯ ಗಮನಕ್ಕೆ ಬಂದಿದ್ದೇ ಎರಡೂ ಶೆಟರ್ ಗಳನ್ನು ತೆರವುಗೊಳಿಸಲಾಗಿದೆ.

READ | ಇನ್ಮುಂದೆ ಆನ್ಲೈನ್ ನಲ್ಲೇ ಪಾವತಿಸಬಹುದು‌ ಆಸ್ತಿ ತೆರಿಗೆ, ಅದಕ್ಕಾಗಿ ಹೀಗೆ ಮಾಡಿ

ಪ್ರತಿ ಹತ್ತು ಮಳಿಗೆಗಳ ನಡುವೆ ಗಾಳಿ, ಬೆಳಕಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಾಗ ಬಿಡಲಾಗಿದೆ. ಈ ಜಾಗದಲ್ಲಿ ಮಂಗಳವಾರ ರಾತ್ರಿ ನೈಟ್ ಕಫ್ರ್ಯೂ ವೇಳೆ ರೋಲಿಂಗ್ ಶೆಟರ್ ಹಾಕಲಾಗಿದೆ.

ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ ಅವರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ, ಅವರ ಸಮಕ್ಷಮದಲ್ಲಿಯೇ ತೆರವುಗೊಳಿಸಲಾಯಿತು.

ಖಾಸಗಿ ಬಸ್ ನಿಲ್ದಾಣದಲ್ಲಿ ಒಟ್ಟು 64 ಮಳಿಗೆಗಳಿದ್ದು, ಅದರ ಮಧ್ಯೆ ಅಕ್ರಮವಾಗಿ ಎರಡು ಶೆಟರ್ ಹಾಕಲಾಗಿತ್ತು. ಆದರೆ, ಇದುವರೆಗೆ ಯಾವುದೇ ವ್ಯವಹಾರ ಆರಂಭಿಸಿರಲಿಲ್ಲ. ಕೇವಲ ಶೀಟ್ ಮತ್ತು ಶೆಟರ್ ಹಾಕಲಾಗಿತ್ತು. ಅದನ್ನು ತೆರವುಗೊಳಿಸಿದ ಬಳಿಕ ಒತ್ತುವರಿದಾರರ ಮೇಲೆ ಅನಿತಾ ಮತ್ತು ಧೀರರಾಜ್ ಅವರು ಕೆಂಡಾಮಂಡಲವಾದರು.

https://www.suddikanaja.com/2021/04/20/police-department-distributed-mask-in-publick-place/

error: Content is protected !!