ಶಿವಮೊಗ್ಗದ ಅಂಗಡಿಗಳಿಗೆ 1 ವರ್ಷದಲ್ಲಿ ಬಿತ್ತು 17.76 ಲಕ್ಷ ದಂಡ, ಕಾರಣವೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಾನೂನು ಮಾಪನಶಾಸ್ತ್ರ ಇಲಾಖೆಯು 2020-21ನೇ ಸಾಲಿನಲ್ಲಿ 1078 ಪ್ರಕರಣಗಳಲ್ಲಿ 17,76,200 ದಂಡ ವಸೂಲಿ ಮಾಡಲಾಗಿದೆ.

READ | ಕೆ.ಎಸ್.ಆರ್.ಟಿ.ಸಿ. ಮುಷ್ಕರ, ಮೂರನೇ ದಿನ ಹೇಗಿದೆ ಬಸ್ ಸಂಚಾರ?, ಎಲ್ಲೆಲ್ಲಿಗೆ ಬಸ್ ಲಭ್ಯ?

2020ರ ಏಪ್ರಿಲ್ ನಿಂದ 2021 ಮಾರ್ಚ್ 31ರ ವರೆಗೆ ಜಿಲ್ಲೆಯಲ್ಲಿ 2,281 ವ್ಯಾಪಾರಸ್ಥರ ಹಾಗೂ ಕೈಗಾರಿಕಾ ಕೇಂದ್ರಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇದಲ್ಲದೆ ವ್ಯಾಪಾರ, ವ್ಯವಹಾರ ನಡೆಸುವವರು ಬಳಸುವ ತೂಕ ಮತ್ತು ಅಳತೆ ಪರಿಕರಗಳ ಸತ್ಯಾಪನಾ ನಡೆಸಿ 1,33,53,301 ರೂ. ಶುಲ್ಕ ವಸೂಲಿ ಮಾಡಲಾಗಿದೆ. ವಂಚನೆ ಆರೋಪದಲ್ಲಿ ದಾಖಲಾದ ಮೊಕದ್ದಮೆಗಳ ಪೈಕಿ 1,078 ಪ್ರಕರಣಗಳನ್ನು ರಾಜಿ ಅಭಿಸಂದಾನದ ಮೂಲಕ ಇತ್ಯರ್ಥಪಡಿಸಿ, ತಪ್ಪಿತಸ್ಥರಿಂದ 17,76,200 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. 14 ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಲಾಖೆಯ ಸಹಾಯಕ ನಿಯಂತ್ರಕ ಎಸ್.ಮಂಜುನಾಥ್ ತಿಳಿಸಿದ್ದಾರೆ.

READ | ಮಾಸ್ಕ್ ಧರಿಸದಿದ್ದರೆ ಇಂದಿನಿಂದ ಬೀಳುತ್ತೆ ದಂಡ, ಪಾಲಿಕೆ ಸಭೆಯಲ್ಲಿ ನಿರ್ಧಾರ, ಏನೇನು ಚರ್ಚೆ ನಡೀತು?

ಕಾನೂನು ಮಾಪನಶಾಸ್ತ್ರ ಇಲಾಖೆಯು 2020-21ನೇ ಸಾಲಿನಲ್ಲಿ ದೋಷಪೂರಿತ ತೂಕ ಮತ್ತು ಅಳತೆ ಪರಿಕರಗಳನ್ನು ಬಳಸುವುದು, ತೂಕ ಮತ್ತು ಅಳತೆಯಲ್ಲಿ ವಂಚಿಸುವುದು, ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ ಜಿಲ್ಲೆಯ ವ್ಯಾಪಾರಿ ಸಂಸ್ಥೆಗಳನ್ನು ಗುರುತಿಸಿ 1,086 ಮೊಕದ್ದಮೆ ದಾಖಲಿಸಲಾಗಿದೆ.

ನ್ಯಾಯಬೆಲೆ ಅಂಗಡಿ, ಚಿಲ್ಲರೆ ಸೀಮೆಎಣ್ಣೆ ಮಾರಾಟಗಾರರು, ಸಗಟು ವ್ಯಾಪಾರಸ್ಥರು, ಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://www.suddikanaja.com/2021/02/16/target-to-ksrp-police-to-reduce-obesity/

error: Content is protected !!