ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಖಾಲಿ ಉಳಿದಿದ್ದ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ವಿವಿಧೆಡೆಯಿಂದ ನಿಯೋಜನೆ ಮಾಡಲಾಗಿದೆ. ಅದೇ ರೀತಿ ಶಿವಮೊಗ್ಗದ ಡಿವೈಎಸ್ಪಿವೊಬ್ಬರಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
READ | ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಪಿಡಿಓ
ಯಾವ ಠಾಣೆಗೆ ಹೊಸ ಪಿಐ?
ದೊಡ್ಡಪೇಟೆ ಪೊಲೀಸ್ ಠಾಣೆ: ಸಿಐಡಿಯಿಂದ ರವಿ ಸಂಗನಗೌಡ ಪಾಟೀಲ್ ಅವರನ್ನು ದೊಡ್ಡಪೇಟೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆಯೇ ವರ್ಗಾವಣೆಯಾದರೂ ಕರ್ತವ್ಯದಿಂದ ಬಿಡುಗಡೆ ಹೊಂದದ ಅಂಜನಕುಮಾರ್ ರಿಲೀವ್ ಆಗಲಿದ್ದಾರೆ.
ಕೋಟೆ ಪೊಲೀಸ್ ಠಾಣೆ: ಕರ್ನಾಟಕ ಲೋಕಾಯುಕ್ತ ಆದೇಶದಲ್ಲಿರುವ ಚಂದ್ರಶೇಖರ್ ಎನ್.ಹರಿಹರ ಅವರನ್ನು ಕೋಟೆಗೆ ವರ್ಗಾವಣೆ ಮಾಡಲಾಗಿದೆ. ಈ ಠಾಣೆಗೂ ಅಂಜನ ಕುಮಾರ್ ಅವರೇ ಇನ್’ಚಾರ್ಜ್’ನಲ್ಲಿದ್ದರು.
ಸಾಗರ ಗ್ರಾಮಾಂತರ ಠಾಣೆ: ಐಎಸ್.ಡಿಗೆ ವರ್ಗಾವಣೆ ಆದೇಶದಲ್ಲಿರುವ ಸಿ.ಇ.ರೋಹಿತ್ ಅವರನ್ನು ಸಾಗರ ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಜಯನಗರ ಪೊಲೀಸ್ ಠಾಣೆ: ಖಾನಾಪುರ ಪಿಟಿಎಸ್ ವರ್ಗಾವಣೆ ಆದೇಶದಲ್ಲಿರುವ ಎಚ್.ಎಂ.ಸಿದ್ದೇಗೌಡ ಅವರನ್ನು ಜಯನಗರಕ್ಕೆ ವರ್ಗಾವಣೆ ಮಾಡಲಾಗಿದೆ.
ಡಿವೈಎಸ್ಪಿ ವರ್ಗಾವಣೆ
ಶಿವಮೊಗ್ಗ ಡಿಸಿಆರ್.ಬಿ ಡಿವೈಎಸ್ಪಿ ಆಗಿದ್ದ ಡಿ.ಟಿ.ಪ್ರಭು ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.