ಮೇಯರ್ ಸಿಟಿ ರೌಂಡ್ಸ್; ಓ.ಟಿ.ರೋಡ್ ಗುಜರಿ ಅಂಗಡಿಗಳಿಗೆ ರೆಡ್ ಅಲರ್ಟ್, ಒಂದು ವಾರ ಡೆಡ್ ಲೈನ್ ನೀಡಿದ‌ ಪಾಲಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಓ.ಟಿ.ರಸ್ತೆಯಲ್ಲಿರುವ ಗುಜರಿ‌ ಅಂಗಡಿಗಳಿಗೆ ಮಹಾನಗರ ಪಾಲಿಕೆ ಒಂದು ವಾರದ ಗಡುವು ನೀಡಿದೆ. ಈ ಅವಧಿಯಲ್ಲಿ ರಸ್ತೆಯ ಮೇಲೆ ಹಾಗೂ ಪಾಲಿಕೆ ಜಾಗದಲ್ಲಿ ದಾಸ್ತಾನು ಮಾಡಿರುವ ಸಾಮಗ್ರಿ‌ ಎತ್ತಂಗಡಿ ಮಾಡದಿದ್ದರೆ, ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

READ | ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದ ನಾಲ್ವರು ಕೆ.ಎಸ್.ಆರ್.ಟಿ.ಸಿ ನೌಕರರು ಸಸ್ಪೆಂಡ್, ಡ್ಯೂಟಿಗೆ ಹಾಜರಾಗದ ನಾಲ್ವರ ಎತ್ತಂಗಡಿ

ಗುರುವಾರ ಪಾಲಿಕೆಯ ಮೇಯರ್ ಸುನೀತಾ ಅಣ್ಣಪ್ಪ ಅವರ ತಂಡ ಓ.ಟಿ.ರಸ್ತೆಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಲಾಗಿ ರಸ್ತೆಯುದ್ದಕ್ಕೂ‌ ಗುಜರಿ‌ ಸಾಮಗ್ರಿ ಬಿಸಾಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಗರಂ‌ ಆದ ಮೇಯರ್‌ ತೆರವುಗೊಳಿಸಿ‌ ವಾಹನಗಳ ಸಲೀಸು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮೇಯರ್ ಸೂಚನೆ ನೀಡಿದ್ದಾರೆ.
ವಾಹನಗಳ‌ಬಿಡಿ ಭಾಗದ‌ ರಾಶಿ‌ | ಮಾರ್ಡನ್ ಟಾಕೀಸ್ ಪಕ್ಕ ಹಾಗೂ‌ ಹಿಂಭಾಗ ಗುಜರಿ ಮತ್ತು ಹಳೆ ವಾಹನ ಬಿಡಿ ಭಾಗಗಳನ್ನು ರಸ್ತೆಯಲ್ಲಿಯೇ  ಹಾಕಲಾಗಿದೆ. ಸಾರ್ವಜನಿಕರಿಂದಲೂ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಮೇಯರ್ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ.
ಉಪ ಮೇಯರ್ ಶಂಕರ್ ಗನ್ನಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಕೆ.ವಿ. ಅಣ್ಣಪ್ಪ, ಆರೋಗ್ಯಾಧಿಕಾರಿ ಅಮೋಘ್ ಉಪಸ್ಥಿತರಿದ್ದರು.

https://www.suddikanaja.com/2021/04/12/mall-lease-agreement-case-committee-found-for-investigation/

error: Content is protected !!