ಖಾಸಗಿ ಬಸ್ ನಿಲ್ದಾಣದಲ್ಲಿ ಪೊಲೀಸರಿಂದ ಗಾಂಧಿಗಿರಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪೊಲೀಸ್ ಇಲಾಖೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ‌ಗಾಂಧಿ ಗಿರಿ ಮೂಲಕ ಜನರ‌ಮೆಚ್ಚುಗೆ ಪಡೆದಿದೆ. ಮಾಸ್ಕ್ ಹಾಕಿಲ್ಲವೆಂಬ ಕಾರಣಕ್ಕೆ ದಂಡ ವಿಧಿಸುವುದಕ್ಕೆ ಮಾತ್ರ ಪೊಲೀಸರು ಬರುತ್ತಾರೆ ಎಂಬ ಅಪವಾದಕ್ಕೆ ವಿರುದ್ಧವಾಗಿ ಖಾಕಿ ನಡೆದುಕೊಂಡಿದೆ.
ಖಾಸಗು ಬಸ್ ನಿಲ್ದಾಣದಲ್ಲಿ ಮಾಸ್ಕ್‌ ಧರಿಸದೇ ಬಂದವರಿಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್.ಟಿ.ಶೇಖರ್ ನೇತೃತ್ವದಲ್ಲಿ ಮಾಸ್ಕ್ ವಿತರಿಸಿ‌ ಕೋವಿಡ್ ಗಂಭೀರತೆಯ ಬಗ್ಗೆ ಅರಿವು ಮೂಡಿಸಲಾಯಿತು.

READ | ಕೊರೊನಾ‌ ಕಂಪ್ಲೇಂಟ್ ಗೆ ತಾಲೂಕು‌ ಮಟ್ಟದಲ್ಲಿ ಕಂಟ್ರೋಲ್ ರೂಂ, ಮತ್ತೆ ಶುರುವಾಗಲಿ ಕೋವಿಡ್ ಕೇರ್ ಸೆಂಟರ್

ಪ್ರತಿ ದಿನ ಮಾಸ್ಕ್ ಧರಿಸುವಂತೆ ಒತ್ತಡ ಹೇರುತ್ತಿದ್ದ ಪೊಲೀಸ್ ಇಲಾಖೆಯು ಸೋಮವಾರದಂದು ಬಸ್ ನಿಲ್ದಾಣದಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲಿಸದೇ ನಿಂತಿದ್ದರು. ಏಕಾಏಕಿ ಸ್ಥಳಕ್ಕೆ ಎ.ಎಸ್.ಪಿ ನೇತೃತ್ವದ ತಂಡ ಭೇಟಿ‌ ನೀಡಿತು. ಜನ ದಂಡ ಹಾಕಲು ಬಂದಿದ್ದಾರೆ ಎಂದು ಭಾವಿಸಿ ಕೈಯಲ್ಲಿದ್ದ ಬಟ್ಟೆ, ಕೈವಸ್ತ್ರ, ವೇಲ್ ಗಳನ್ನು ಮಾಸ್ಕ್ ರೂಪದಲ್ಲಿ ಕಟ್ಟಿಕೊಂಡರು. ಆದರೆ, ಪೊಲೀಸರು ದಂಡ ಪ್ರಯೋಗಕ್ಕೆ ಮುಂದಾಗದೇ ಮುನ್ನೂರಕ್ಕೂ ಅಧಿಕ ಮಾಸ್ಕ್ ಗಳನ್ನು ವಿತರಿಸಿದರು.

ಡಾ.ಶೇಖರ್‌‌ ಅವರು ಮಕ್ಕಳಿಗೆ ತಾವೇ ಮಾಸ್ಕ್ ತೊಡಿಸಿ ಪೋಷಕರನ್ನು ತರಾಟೆಗೆ ತೆಗೆದುಕೊಂಡರು. ಮಾಸ್ಕ್‌ ಧರಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ, ಡಿವೈಎಸ್.ಪಿ ಪ್ರಶಾಂತ್ ಮುನ್ನೋಳಿ ಸೇರಿದಂತೆ ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

https://www.suddikanaja.com/2021/04/18/fine-for-not-wearing-mask-in-shivamogga/

error: Content is protected !!