ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ವಿಧಾನ ಪರಿಷತ್ತಿಗೆ ಮತದಾರರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಉತ್ತಮವಾಗಿ ಸಾಗಿದೆ ಮಧ್ಯಾಹ್ನ 12ರ ಹೊತ್ತಿಗೆ ಶೇ.70.27ರಷ್ಟು ಚುನಾಯಿತ ಪ್ರತಿನಿಧಿಗಳು ಮತದಾನ ಮಾಡಿದ್ದಾರೆ.
ಬೆಳಗ್ಗೆ 10ಕ್ಕೆ ಮತದಾನದ ಪ್ರಮಾಣ ಶೇ.30.23ರಷ್ಟಿತ್ತು. ತದನಂತರ, ಮತಗಟ್ಟೆಗಳು ಬಂದ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ವರದಿಯಾಗಿಲ್ಲ.