ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೋಗ ಜಲಪಾತದ ವಿವಿಧ ಕಾಮಗಾರಿಗಳಿಗೆ ಜುಲೈ 24ರಂದು ವಚ್ರ್ಯುವೆಲ್ ಮೂಲಕ ಚಾಲನೆ ನೀಡಲಿದ್ದಾರೆ.
165 ಕೋಟಿ ರೂಪಾಯಿ ಮೌಲ್ಯದ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಯಾವ್ಯಾವ ಕಾಮಗಾರಿಗಳಿಗೆ ಚಾಲನೆ | ರೋಪ್ ವೇ, ಬೃಹತ್ ಪ್ರವೇಶ ದ್ವಾರ, ಶರಾವತಿ ವಿಗ್ರಹ, ಎಂ.ಎಚ್.ಪಿ.ಎಸ್.ನಿಂದ ಜಲಪಾತದ ಕೆಳ ಹಂತದವರೆಗೆ ಸಂಪರ್ಕ ಬ್ಯಾರೇಜ್, ಬೋಟಿಂಗ್ ವ್ಯವಸ್ಥೆ, ವ್ಯೂಡೆಕ್, ವೀವ್ ಪಾಯಿಂಟ್, ಪಾರ್ಕಿಂಗ್ ಸೌಲಭ್ಯ, ಮ್ಯೂಸಿಯಂ ಅಭಿವೃದ್ಧಿ, ತಳಕಳಲೆಯಲ್ಲಿ ಜಲಕ್ರೀಡೆ ಹೀಗೆ ನಾನಾ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದರೊಂದಿಗೆ ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಲೋಕಾರ್ಪಣೆಗೊಳಿಸಲಿದ್ದಾರೆ.