ಖಾಸಗಿ ಬಸ್ ಮಾಲೀಕ, ಪೊಲೀಸರ ನಡುವೆ ಬಿರುಸಿನ ಚಕಮಕಿ, ಕಾರಣವೇನು ಗೊತ್ತಾ?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಪೊಲೀಸರು ಮತ್ತು ಖಾಸಗಿ ಬಸ್ ಮಾಲೀಕರ ನಡುವೆ ಬುಧವಾರ ಮಾತಿನ ಚಕಮಕಿ ನಡೆದಿದೆ.

READ | ರಸ್ತೆಗಿಳಿಯದ ಕೆಎಸ್.ಆರ್.ಟಿ.ಸಿ ಬಸ್, ಹೇಗಿದೆ ಸ್ಥಿತಿ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರ‌ ಹಿನ್ನೆಲೆ ಖಾಸಗಿ ಬಸ್ ಗಳಿಂದ ಸಹಕಾರ ಕೋರಲಾಗಿದ್ದು, ಸರ್ಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಲುಗಡೆ ಮಾಡಲಾಗಿದೆ. ಈ ಸಂಬಂಧ ಉಂಟಾದ ವಿವಾದ ಪರಸ್ಪರರು ಜಗಳವಾಡುವ ಮಟ್ಟಿಗೆ ಬೆಳೆದಿದೆ.
ವಾಗ್ವಾದಕ್ಕೇನು ಕಾರಣ | ಬಸ್ ನಿಲ್ದಾಣ ಪಕ್ಕದ ಜಾಗದಲ್ಲಿ ಬೆಂಗಳೂರಿಗೆ ಹೋಗಬೇಕಾದ ಬಸ್ ನಿಲುಗಡೆ ಮಾಡಲಾಗಿತ್ತು. ಅಲ್ಲಿಗೆ ಬಂದ ಟ್ರಾಫಿಕ್ ಪೊಲೀಸರೊಬ್ಬರು ಬಸ್ ಬೇರೆಡೆ ನಿಲ್ಲಿಸುವಂತೆ ತಿಳಿಸಿದ್ದಾರೆ. ಇದರಿಂದ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ.

error: Content is protected !!