ಕೋವಿಡ್ ಗಿಂತ ಭಯದಿಂದಲೇ ಜನ ಸಾಯುತಿದ್ದಾರೆ: ಬಸವ ಕೇಂದ್ರ ಶ್ರೀ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕಿಗಿಂತ ಜನ ಭಯದಿಂದಲೇ ಸಾಯುತಿದ್ದಾರೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಶುಭ ಮಂಗಳ ಸಮುದಾಯ ಭವನದಲ್ಲಿ ಸೇವಾ ಭಾರತಿ, ಕೋವಿಡ್ ಸುರಕ್ಷಾ ಪಡೆ ನೇತೃತ್ವದಲ್ಲಿ ಹಾಗೂ ಮೆಟ್ರೋ ಯುನೈಟೆಡ್ ಹೆಲ್ತ್‌ ಕೇರ್‌ನ ವೈದ್ಯಕೀಯ ನೆರವಿನೊಂದಿಗೆ ಆರಂಭಿಸಲಾಗಿರುವ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಉಚಿತ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

READ | ಕೊರೊನಾದಿಂದ ಮೃತಪಟ್ಟವನ ಕೊನೆಯ ಸಲ ಮುಖ ನೋಡಲು ಹೋದಾಗ ಕುಟುಂಬದವರಿಗೆ ಕಾದಿತ್ತು ಶಾಕ್! ಆಗಿದ್ದೇನು ಗೊತ್ತಾ?

ಕೊರೊನಾ ಸೋಂಕಿತರು ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ಅದರಿಂದ ಹೊರಬರಬಹುದು. ಹೆದರಿಕೊಂಡು ಎದೆಗುಂದಿದರೆ ಸಾವಿನ ಬಾಗಿಲು ತಟ್ಟಬೇಕಾಗುತ್ತದೆ ಎಂದು ತಿಳಿಸಿದರು.

ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಆರ್‌ಎಸ್‌ಎಸ್ ವಿಭಾಗ ಪ್ರಚಾರಕ ಬಾಲಕೃಷ್ಣ ಕಿಣಿ, ಪಟ್ಟಾಭಿರಾಮ, ಶಾಸಕರಾದ ಆಯನೂರು ಮಂಜುನಾಥ, ಎಸ್. ರುದ್ರೇಗೌಡ, ಮೇಯರ್ ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಕಾಡಾ ಅಧ್ಯಕ್ಷೆ ಪ್ರವಿತ್ರ ರಾಮಯ್ಯ, ಪ್ರಮುಖರಾದ ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಜೆ.ಆರ್.ವಾಸುದೇವ್, ಡಾ. ರವಿಕಿರಣ್, ಡಾ. ಪೃಥ್ವಿ, ಡಾ. ತೇಜಸ್ವಿ ಉಪಸ್ಥಿತರಿದ್ದರು.

https://www.suddikanaja.com/2021/03/08/to-defeat-covid-trust-medication/

error: Content is protected !!