ಭದ್ರಾವತಿಯ ಅತಿ ಹೆಚ್ಚು ಕೊರೊನಾ ಸೋಂಕಿರುವ ಪ್ರದೇಶದಲ್ಲಿ ನಡೀತು ಜಾಗೃತಿ ಕಾರ್ಯಕ್ರಮ, ಫುಡ್ ಕಿಟ್ ವಿತರಣೆ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲ್ಲೂಕಿನ ಯರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಕಾಲೊನಿಯಲ್ಲಿ 150 ದಿನಸಿ ಸಾಮಗ್ರಿಗಳ ಕಿಟ್‍ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

READ | ಶಿವಮೊಗ್ಗದಲ್ಲಿ ಭದ್ರಾವತಿ ಮೂಲದ ‘ಆಕ್ಸಿಜನ್ ಮ್ಯಾನ್’ ಹವಾ, ಬಡವರ ಕಷ್ಟಕ್ಕೆ ಮಿಡಿದ ಹೃದಯ

ಭದ್ರಾವತಿ ತಹಸೀಲ್ದಾರ್ ಸಂತೋಷ್ ಕುಮಾರ್ ಅವರ ಸಮ್ಮುಖದಲ್ಲಿ ಭದ್ರಾವತಿ ತಾಲ್ಲೂಕು ಜೈನ ಸಮಾಜದ ವತಿಯಿಂದ ಫುಡ್ ಕಿಟ್ ಗಳನ್ನು ವಿತರಿಸಾಲಾಯಿತು.

ಕೋವಿಡ್ ಕುರಿತು ಜಾಗೃತಿ | ಭದ್ರಾವತಿ ತಾಲ್ಲೂಕಿನ ಅತಿ ಹೆಚ್ಚು ಕೋವಿಡ್ ಪಾಸಿಟಿವ್ ಕಂಡು ಬರುತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ಯರೇಹಳ್ಳಿ ಪಂಚಾಯಿತಿ ಸಹ ಒಂದಾಗಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ನಡೆಸಲಾಯಿತು.

READ | ಜಿಲ್ಲಾಡಳಿತದಿಂದ ಒಂದು ವಾರ ಲಾಕ್ ಡೌನ್ ಪರಿಷ್ಕೃತ ಆದೇಶ, ಬ್ಯಾಂಕ್ ಗಳಿಗಿಲ್ಲ ರಜೆ

ಕೂಡ್ಲಿಗೆರೆ ಉಪ ತಹಸೀಲ್ದಾರ್ ನಾರಾಯಣ ಗೌಡ್ರು, ಕಸಬಾ ರಾಜಸ್ವ ನಿರೀಕ್ಷಕ ಪ್ರಶಾಂತ್, ಕೂಡ್ಲಿಗೆರೆ ರಾಜಸ್ವ ನಿರೀಕ್ಷಕ ಜಗದೀಶ್, ಗ್ರಾಮ ಲೆಕ್ಕಾಧಿಕಾರಿ ಜಗನ್ನಾಥ್ , ಜೈನ ಸಮಾಜದ ಪ್ರಮುಖರಾದ ಸಂಪತ್ ರಾಜ್ ಭಾಟಿಯ, ವಿಕ್ರಮ್ ಜೈನ್, ಅಶೋಕ್, ರಾಹುಲ್, ದಿನೇಶ್, ಗ್ರಾಪಂ ಸದಸ್ಯ ರಮೇಶ್ ಇತರರಿದ್ದರು.

https://www.suddikanaja.com/2021/03/25/plastic-awareness-by-swr/

error: Content is protected !!