ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೀಪಾವಳಿ ಹಬ್ಬದ (Deepavali Festival) ಪ್ರಯುಕ್ತ ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಹುಲಿ-ಸಿಂಹಧಾಮದಲ್ಲಿನ ಮೃಗಾಲಯ ಮತ್ತು ಸಫಾರಿ ವೀಕ್ಷಣೆಯನ್ನು ನ.14ರ ಮಂಗಳವಾರ ಸಹ ತೆರೆದಿರುತ್ತದೆ. ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಬಹುದೆಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
READ | ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅಗ್ಗತ್ಯ ಸೌಲಭ್ಯ
ಗೌರವಧನ ಆಧಾರದಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
SHIMOGA: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಜಿಲ್ಲಾ ಬಾಲಭವನದಲ್ಲಿ ಖಾಲಿ ಇರುವ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಹಾಗೂ ಕಚೇರಿ ಸಹಾಯಕರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಯನ್ನು ಉಪ ನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪಡೆದು ನ.29 ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಗೆ ಖುದ್ದಾಗಿ ಅಥವಾ ಕಚೇರಿ ದೂರವಾಣಿ ಸಂಖ್ಯೆ 08182-295514 ನ್ನು ಸಂಪರ್ಕಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ
SHIMOGA: 2023-24ನೇ ಸಾಲಿನ 14 ರಿಂದ 17 ವರ್ಷ ವಯೋಮಾನದ ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಗಳನ್ನು ನ.21 ಮತ್ತು 22 ರಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸಿ.ಆರ್.ಪರಮೇಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ
SHIMOGA: 2023-24 ನೇ ಸಾಲಿಗೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಬರುವ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯದವರಿಗೆ ಆರ್ಥಿಕ ಅಭಿವೃದ್ದಿಯನ್ನು ಹೊಂದಲು ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ(ನೇರ ಸಾಲ) ಯೋಜನೆ, ಉದ್ಯಮಶೀಲತಾ ಯೋಜನೆ(2.00 ಲಕ್ಷ ಮತ್ತು 4.00 ಲಕ್ಷ), ಭೂ ಒಡೆತನ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನತೆಗೆ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ದಿ: 30-11-2023 ಕಡೆಯ ದಿನವಾಗಿದೆ. ಆಸಕ್ತರು ಸೇವಾ ಸಿಂಧು ಪೋರ್ಟಲ್ ಮೂಲಕ ಕರ್ನಾಟಕ ಒನ್, ಗ್ರಾಮ ಒನ್ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಪಿ.ಎಂ. ವಿಶ್ವಕರ್ಮ ಯೋಜನೆಯಡಿ ನೋಂದಣಿ
SHIMOGA: ಕೇಂದ್ರ ಸರ್ಕಾರದ ‘ಪಿ.ಎಂ ವಿಶ್ವಕರ್ಮ’ ಎಂಬ ಹೊಸ ಯೋಜನೆಯಡಿ ಈ ಕೆಳಕಂಡ ಕುಶಲಕರ್ಮಿಗಳು ಗ್ರಾಮ ಮತ್ತು ನಗರ ವ್ಯಾಪ್ತಿಯಲ್ಲಿ ಬರುವ ಸಾಮಾನ್ಯ ಸೇವಾ ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸೌಲಭ್ಯ ಪಡೆದುಕೊಳ್ಳಬಹುದು.
ಕುಶಲಕರ್ಮಿಗಳಾದ ಬಡಗಿ/ ಮರಗೆಲಸ ವೃತ್ತಿ ಮಾಡುವವರು, ದೋಣಿ ತಯಾರಿಸುವವರು, ಶಸ್ತ್ರ ತಯಾರಕರು, ಕಮ್ಮಾರ ವೃತ್ತಿ ಮಾಡುವವರು, ಕಲ್ಲುಕುಟಿಗ ವೃತ್ತಿ ಮಾಡುವವರು,ಚಾಪೆ-ಕಸ ಪೆÇರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು (ಸಾಂಪ್ರದಾಯಿಕ),ಕ್ಷೌರಿಕ ವೃತ್ತಿ ಮಾಡುವವರು, 9.ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ಅಗಸರು (ದೋಬಿ), ಆಭರಣ ತಯಾರಕರು, ಶಿಂಪಿಗ(ಬಟ್ಟೆ ಹೊಲೆಯುವರು), ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ), ಚಮ್ಮಾರ ಪಾದರಕ್ಷೆ ತಯಾರಕರು, ಬೀಗ ತಯಾರಕರು, ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಕುಶಲಕರ್ಮಿಗಳು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಯಡಿ ಕುಶಲಕರ್ಮಿಗಳಿಗೆ ಪಿ.ಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ವಿತರಣೆ, ಕೌಶಲ್ಯ ವರ್ಧನೆಗೆ ತರಬೇತಿ ಮತ್ತು ಶಿಷ್ಯ ವೇತನ ನೀಡಲಾಗುವುದು. ಉಪಕರಣಗಳ ಕಿಟ್(ಟೂಲ್ ಕಿಟ್ ಇನ್ಸೆಂಟಿವ್)ಗೆ ಪ್ರೋತ್ಸಾಹ. ಮೊದಲ ಹಂತದಲ್ಲಿ 1.ಲಕ್ಷ, 2ನೇ ಹಂತದಲ್ಲಿ 2 ಲಕ್ಷದವರೆಗಿನ ಸಾಲವನ್ನು ಬ್ಯಾಂಕಿನ ಮೂಲಕ ಕೇವಲ ಶೇಕಡ 5ರಷ್ಟು ಬಡ್ಡಿ ದರದಲ್ಲಿ ನೀಡಲಾಗುವುದು. ಡಿಜಿಟಲ್ ವಹಿವಾಟಿಗೆ ಸಹಾಯಧನ. ಉತ್ಪನ್ನಗಳಿಗೆ ಮಾರುಕಟ್ಟೆ ಬೆಂಬಲ ಸೌಲಭ್ಯಗಳನ್ನು ನೀಡಲಾಗುವುದು ಎಂದು ಜಿಲ್ಲಾ ಕೈಗಾರಿಕ ಕೇಂದ್ರ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.