ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ವೈರಸ್ ಸೋಂಕಿನಿಂದ ಸಾಯುವವರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಸಾವಿನ ಅಬ್ಬರ ಮುಂದುವರಿದಿದೆ.
READ | ಜಿಲ್ಲಾಡಳಿತದಿಂದ ಲಾಕ್ ಡೌನ್ ಪರಿಷ್ಕೃತ ಆದೇಶ, ಬ್ಯಾಂಕ್ ಗಳಿಗಿಲ್ಲ ರಜೆ
ಶನಿವಾರ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 669 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅದರಲ್ಲಿ 35 ವಿದ್ಯಾರ್ಥಿಗಳು, 5 ಸಿಬ್ಬಂದಿ ಇದ್ದಾರೆ. 793 ಜನ ಗುಣಮುಖರಾಗಿದ್ದಾರೆ. 14 ಜನ ಮೃತಪಟ್ಟಿದ್ದಾರೆ.
https://www.suddikanaja.com/2021/05/16/covid-treatment-unit-starts/
2,470 ಮಾದರಿಯನ್ನು ಪಡೆದಿದ್ದು, 1,354 ನೆಗೆಟಿವ್ ಬಂದಿವೆ. ಮೆಗ್ಗಾನ್ ನಲ್ಲಿ 642 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್ಸಿಯಲ್ಲಿ 318, ಕೋವಿಡ್ ಕೇರ್ ಸೆಂಟರ್ನಲ್ಲಿ 1,373, ಖಾಸಗಿ ಆಸ್ಪತ್ರೆಯಲ್ಲಿ 1,424, ಹೋಮ್ ಐಸೋಲೇಷನ್ ನಲ್ಲಿ 2,622, ಟ್ರಿಯೇಜ್ ನಲ್ಲಿ 866 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,249 ಇದೆ.
ತಾಲೂಕುವಾರು ವರದಿ | ಶಿವಮೊಗ್ಗ 261, ಭದ್ರಾವತಿ 154, ತೀರ್ಥಹಳ್ಳಿ 30, ಶಿಕಾರಿಪುರ 49, ಹೊಸನಗರ 14, ಸೊರಬ 71, ಬಾಹ್ಯ ಜಿಲ್ಲೆಯ 30 ಪ್ರಕರಣಗಳಿವೆ.
https://www.suddikanaja.com/2021/05/19/covid-death-increase-in-shivamogga-2/