ನಾಳೆಯಿಂದ 4 ದಿನದ ಲಾಕ್ ಡೌನ್ ಹೇಗಿರಲಿದೆ? ಹಬ್ಬಗಳಿಗೇನು ನಿಯಮ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗುರುವಾರದಿಂದ ಭಾನುವಾರದವರೆಗೆ ಲಾಕ್ ಡೌನ್ ಘೋಷಿಸಿದ್ದು, ಈ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

https://www.suddikanaja.com/2021/05/11/shivamogga-city-complete-lockdown-for-four-days/

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಹಲವರಿಂದ ವಿವಿಧ ರೀತಿಯ ಆರೋಪಗಳು‌ ಕೇಳಿ ಬರುತ್ತಿವೆ. ಆದರೆ, ಬಸವ ಜಯಂತಿ, ಅಕ್ಷಯ ತೃತೀಯ ಮತ್ತು ರಂಜಾನ್ ಆಚರಣೆಗೆ ಲಾಕ್ ಡೌನ್ ನಿಂದ ಯಾವುದೇ ಅಡ್ಡಿ ಆಗುವುದಿಲ್ಲ. ರಾಜ್ಯ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿಯೇ ವಸ್ತುಗಳನ್ನು ಖರೀದಿಸಬೇಕು. ಆಯಾ ಬಡಾವಣೆ ವ್ಯಾಪ್ತಿಯಲ್ಲಿ ದಿನಸಿ ಅಂಗಡಿಗಳು ಬೆಳಗ್ಗೆ 6ರಿಂದ 10 ಗಂಟೆಯವರೆಗೆ ತೆರೆದಿರಲಿವೆ ಎಂದು ಸ್ಪಷ್ಟಪಡಿಸಿದರು.
ಸೋಂಕಿನಲ್ಲಿ ಗಣನೀಯ ಏರಿಕೆ | ಕೊರೊನಾ ಸೋಂಕಿನ ಪ್ರಮಾಣದಲ್ಲಿ ಭಾರಿ ಏರಿಕೆ ಆಗುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದು, ಅವರ ಮೇಲೆ ನಿಗಾ ಇಡಲಾಗುತ್ತಿದೆ. ಸೋಂಕು ಹೆಚ್ಚುವ ಸಾಧ್ಯತೆ ಹಿನ್ನೆಲೆ ಬಿಗಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ವಿಧಾನ್ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉಪಸ್ಥಿತರಿದ್ದರು.

https://www.suddikanaja.com/2021/04/28/food-distribution-by-youth-congress/

error: Content is protected !!