‘ಈಶ್ವರಪ್ಪ ವಿಘ್ನ ಸಂತೋಷಿ, ಲಾಕ್ ಡೌನ್ ವಿರುದ್ಧ ಕಾಂಗ್ರೆಸ್ ಆಕ್ರೋಶ’

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ರಂಜಾನ್, ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಸಂದರ್ಭದಲ್ಲಿಯೇ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಮಾಡುವುದಾಗಿ ಘೋಷಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿಘ್ನ ಸಂತೋಷಿ. ಇನ್ನೊಬ್ಬರ ಕಷ್ಟ ಕಂಡು ಸಂತೋಷ ಪಡುವವರು ಎಂದು ಮಾಜಿ ಶಾಸಕ‌ ಕೆ.ಬಿ.ಪ್ರಸನ್ನ ಕುಮಾರ್ ಆರೋಪಿಸಿದರು‌.

https://www.suddikanaja.com/2021/05/11/shivamogga-city-complete-lockdown-for-four-days/

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದನ್ನು ಅನುಷ್ಠಾನ‌ ಕೂಡ ಮಾಡಲಾಗುತ್ತಿದೆ. ಹೀಗಿರುವಾಗ, ಏಕಾಏಕಿ ನಾಲ್ಕು ದಿನಗಳ ಲಾಕ್ ಡೌನ್ ಘೋಷಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಲಾಗಿದೆ. ಇದರಿಂದ ಜನ, ವ್ಯಾಪಾರಿಗಳು ಆತಂಕಕ್ಕೆ‌ ಒಳಗಾಗಿದ್ದಾರೆ ಎಂದು ಹೇಳಿದರು.
ಇನ್ನೊಬ್ಬರ ಕಷ್ಟಗಳನ್ನು ನೋಡಿ ಸಂತೋಷ ಪಡುವವರನ್ನು ವಿಘ್ನ ಸಂತೋಷಿ ಎನ್ನುತ್ತೇವೆ. ಈಶ್ವರಪ್ಪ ಇದಾಗುತಿದ್ದಾರಾ ಎಂಬ ಅನುಮಾನ ಮೂಡಿಸುತ್ತಿದೆ. ಬಸವ ಜಯಂತಿ, ಅಕ್ಷಯ ತೃತೀಯ, ರಂಜಾನ್ ಎಲ್ಲವೂ ಒಂದೇ ದಿನ ಬಂದಿದೆ. ಆಚರಣೆ ಸಂಭ್ರಮದಲ್ಲಿರುವಾಗ ಲಾಕ್ ಡೌನ್ ಘೋಷಣೆ ಮಾಡುವುದರ ಹಿಂದೆ ದುರುದ್ದೇಶವಿದೆ ಎಂದು ಟೀಕಿಸಿದರು.
ಉಡಾಫೆ ಹೇಳಿಕೆ ಸರಿಯಲ್ಲ | ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಇರುವವರಿಗೆ ಹತ್ತು ಸಾವಿರ ಸಹಾಯ ಧನ ನೀಡುವಂತೆ ಸಲಹೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ ‘ತಮ್ಮಲ್ಲಿ ನೋಟು ಮುದ್ರಿಸುವ ಯಂತ್ರವಿಲ್ಲ’ ಎಂದು ಹೇಳಿದ್ದಾರೆ. ಜನರ ಹಿತ‌ ಕಾಪಾಡುವ ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು ಉಡಾಫೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಪಾಲಿಕೆ ವಿರೋಧ ಯಮುನಾ ರಂಗೇಗೌಡ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಪಾಲಿಕೆ‌‌‌ ಸದಸ್ಯ ರಮೇಶ್ ಹೆಗಡೆ ಮತ್ತಿತರರು‌ ಉಪಸ್ಥಿತರಿದ್ದರು.

https://www.suddikanaja.com/2021/03/10/bull-running-competition-in-sorab/

error: Content is protected !!