ನಾಳೆ ಬೆಳಗ್ಗೆ ವಾಹನ ಸಂಚಾರ ನಿರ್ಬಂಧ, ರಿಲ್ಯಾಕ್ಸ್ ಅವಧಿಯಲ್ಲೂ ದ್ವಿಚಕ್ರ ಹೊರತೆಗೆಯುವಂತಿಲ್ಲ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಸೋಂಕು ತಡೆಗೆ ರಾಜ್ಯ ಸರ್ಕಾರ ವಿಧಿಸಿರುವ ಕಂಪ್ಲೀಟ್ ಲಾಕ್ ಡೌನ್ ಮೇ 10ರಿಂದ 14 ದಿನಗಳ ಕಾಲ ಜಾರಿಯಲ್ಲಿರಲಿದೆ. ಈ ವೇಳೆ ಯಾವುದೇ ಕಾರಣಕ್ಕೂ ಬೈಕ್, ಕಾರುಗಳನ್ನು ಹೊರಗೆ ತೆಗೆಯುವಂತಿಲ್ಲ. ಹಾಗೊಮ್ಮೆ ತೆಗೆದರೆ ಸೀಜ್ ಆಗುವುದು ಪಕ್ಕಾ!

READ | ಮತ್ತಷ್ಟು ಕಠಿಣ ರೂಲ್ಸ್, ಮೇ 10 ರಿಂದ ಕರ್ನಾಟಕ ಲಾಕ್, ಏನಿರಲಿದೆ, ಏನಿರಲ್ಲ? ಯಾವೆಲ್ಲ ನಿಯಮಗಳು ಕಠಿಣ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಈ ಮುಂಚಿನ ಕರ್ಫ್ಯೂ ವೇಳೆ ದ್ವಿಚಕ್ರ ವಾಹನಗಳನ್ನು ಅಗತ್ಯ ವಸ್ತುಗಳ ಖರೀದಿಗೆ ಬಳಸಬಹುದಿತ್ತು. ಆದರೆ, ಸೋಮವಾರದಿಂದ ಏನೇ ಬೇಕಿದ್ದರೂ ನಡೆದುಕೊಂಡು ಹೋಗಲು ಅವಕಾಶ ನೀಡಲಾಗಿದೆಯೇ ವಿನಹ ವಾಹನಗಳಲ್ಲಿ ಓಡಾಡುವಂತಿಲ್ಲ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ. ಅದೂ ನಡೆದುಕೊಂಡೇ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದದರು.
ವರ್ತಕರು, ಬಸ್ ಮಾಲೀಕರು, ಅರ್ಚಕರು, ಹೋಟೆಲ್ ಮಾಲೀಕರು, ಕಲ್ಯಾಣ ಮಂದಿರದ ಮಾಲೀಕರೊಂದಿಗೆ ಚರ್ಚಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಆರ್ಯವೈಶ್ಯ ನಿಗಮ ಅಧ್ಯಕ್ಷ ಅರುಣ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಮತ್ತಿತರರು ಉಪಸ್ಥಿತರಿದ್ದರು.

https://www.suddikanaja.com/2020/11/11/bike-stealing-gang-arrested-in-tunga-nagar-ps/

error: Content is protected !!