ಕ್ವಿಂಟಾಲ್ ಗಟ್ಟಲೇ ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿದ ರೈಸ್ ಸ್ಟೋರ್ ಮೇಲೆ ದಾಳಿ, ಸಿಕ್ಕಿಬಿದ್ದ ಅಕ್ಕಿಯೆಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಸಾಗರ: ಜೆ.ಸಿ.ರಸ್ತೆಯಲ್ಲಿರುವ ಅಕ್ಕಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿಯನ್ನು ತಹಸೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದೆ.
ಶ್ರೀಧರ್ ಶೆಟ್ಟಿ ಎನ್ನುವವರ ಮಾಲೀಕತ್ವದ ಅಂಗಡಿಯಲ್ಲಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಲಾಗಿತ್ತು. ಖಚಿತ ಮಾಹಿತಿ ಅನ್ವಯ ತಂಡ ದಾಳಿ ನಡೆಸಿದೆ.

READ | ಬಾವಿಗೆ ಬಿದ್ದವನ ಪ್ರಾಣ ರಕ್ಷಣೆ, ಹೇಗೆ ನಡೀತು ಕಾರ್ಯಾಚರಣೆ ಗೊತ್ತಾ?

ಸಿಕ್ಕಿದ ಅಕ್ಕಿ ಎಷ್ಟು | ಅಂದಾಜು 15 ಕ್ವಿಂಟಾಲ್ (33 ಚೀಲ) ಅಕ್ಕಿ ದೊರೆತಿದ್ದು, ಅದನ್ನು ವಶಕ್ಕೆ ಪಡೆದು, ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ್, ಕಂದಾಯ ನಿರೀಕ್ಷಕ ಆನಂದ್, ಆಹಾರ ನಿರೀಕ್ಷಕ ಯೋಗೇಶ್ ಇದ್ದರು.

error: Content is protected !!