ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ತಾಲೂಕು ಮಾಳೂರು ನಾಯದವಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದ ವ್ಯಕ್ತಿಯೊಬ್ಬರನ್ನು ತೀರ್ಥಹಳ್ಳಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಾಣ ರಕ್ಷಿಸಿದ್ದಾರೆ.
ಸುಂದರೇಶ್ (60) ಎಂಬುವವರನ್ನು ರಕ್ಷಿಸಲಾಗಿದೆ. ಸೋಮವಾರ ಬೆಳಗ್ಗೆ ಮನೆಯಲ್ಲಿನ ಬಾವಿಗೆ ಅವರು ಬಿದ್ದಿದ್ದಾರೆ. ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಸುಂದರೇಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
READ| ಹೊರಗೆ ಬಂದರೆ ಬೈಕ್ ಸೀಜ್ ಪಕ್ಕಾ, ಎಲ್ಲ ಸರ್ಕಲ್ ಗಳು ಕ್ಲೋಸ್, ಖಾಕಿ ಸರ್ಪಗಾವಲಲ್ಲಿ ಹೇಗಿದೆ ಮೊದಲ ದಿನದ ಲಾಕ್ ಡೌನ್?