ಜೀವಾವಧಿಗೆ ಜಿಂಕೆ ದತ್ತು ಪಡೆದ ಆವೊಪಾ ಸಂಸ್ಥೆ, ಇದು ಮೃಗಾಲಯದ ಇತಿಹಾಸದಲ್ಲೇ ಮೊದಲು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರ್ಯವೈಶ್ಯ ಸಮಾಜದ ವಾಸವಿ ಗುರುಪೀಠದ ಎರಡನೇ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಗುರುಗಳು ಪೀಠಾರೋಹಣ ಮಾಡುತ್ತಿರುವ ಸಂದರ್ಭದ ನೆನಪಿಗಾಗಿ ನಗರದ ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಸಂಘ (ಆವೊಪಾ)ವು ಜಿಂಕೆಯನ್ನು ಜೀವಾವಧಿಗೆ ದತ್ತು ಪಡೆದಿದೆ.

ಆರ್ಯವೈಶ್ಯ ಮಹಾಜನ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತ್ಯಾವರೆಕೊಪ್ಪದ ಮೃಗಾಲಯ ಮತ್ತು ಸಫಾರಿಯಲ್ಲಿ ಜಿಂಕೆಯೊಂದನ್ನು ಅದರ ಜೀವಿತಾವಧಿಗೆ ದತ್ತು ಸ್ವೀಕಾರ ಪಡೆಯುವ ಸಾಂಕೇತಿಕ ಕಾರ್ಯಕ್ರಮವು ನೆರವೇರಿದರು.

ವೈಯಕ್ತಿಕವಾಗಿ ದತ್ತು ಪಡೆಯುವುದು ಸಾಮಾನ್ಯ. ಆದರೆ ಸಂಘ ಸಂಸ್ಥೆಗಳು ದತ್ತು ಪಡೆಯುವ ಉದಾಹರಣೆ ಇದೇ ಮೊದಲು ಎಂದಿರುವ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್‍ಚಂದ್ರ, ಆರ್ಯವೈಶ್ಯ ಸಮಾಜದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಆವೊಪಾ ಅಧ್ಯಕ್ಷ ಎಚ್.ಜಿ.ದತ್ತಕುಮಾರ್, ಕಾರ್ಯದರ್ಶಿ ರಾಧಿಕಾ ಜಗದೀಶ್, ಆರ್ಯವೈಶ್ಯ ಮಹಾಜನ ಸಮಿತಿಯ ಅರವಿಂದ್, ಆರ್ಯವೈಶ್ಯ ಸೊಸೈಟಿಯ ಬೆಲಗೂರು ಮಂಜುನಾಥ್, ನಾಗರಾಜ್ ಶೆಟ್ಟರ್, ಜ್ಯೋತಿ, ಕಿರಣ್, ಬೃಂದಾ, ಸಿಂಚನಾ, ಸಂದೀಪ್ ಪಾಲ್ಗೊಂಡಿದ್ದರು.

https://www.suddikanaja.com/2021/06/06/darshan-thuoogudeepa-promtion-to-animal-adoption/

error: Content is protected !!