ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಪ್ಪನನ್ನು ತಿಂಡಿ ತಿನ್ನುವುದಕ್ಕಾಗಿ ಕರೆಯಲು ಬಂದ ಮಗನ ಮೇಲೆ ವಿದ್ಯುತ್ ತಂತಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಶುಕ್ರವಾರ ನಡೆದಿದೆ.
READ | ಜೂನ್ 15ರ ವರೆಗೆ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ
ಭದ್ರಾವತಿ ತಾಲೂಕಿನ ಅರಹತೋಳಲಿ ಘಟನೆ ನಡೆದಿದ್ದು, ನಿತೀನ್(13) ಎಂಬ ಬಾಲಕ ಮೃತಪಟ್ಟಿದ್ದಾನೆ. ನಿತೀನ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಪ್ಪನನ್ನು ಕರೆಯುವುದಕ್ಕಾಗಿ ಬಂದಿದ್ದಾನೆ. ಆಗ ವಿದ್ಯುತ್ ತಂತಿ ತುಂಡಾಗಿ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಆತ ಮೃತಪಟ್ಟಿದ್ದಾನೆ.