‘ಮಹಿಳಾ ಪೊಲೀಸ್ ಸಿಬ್ಬಂದಿಗೆ ಮದುವೆ ನಂತರ ಪ್ಯಾಂಟ್, ಶರ್ಟ್ ಸಮವಸ್ತ್ರದಿಂದ ವಿನಾಯಿತಿ ನೀಡಿ’

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಿಳಾ ಪೊಲೀಸ್ ಸಿಬ್ಬಂದಿಗೆ ಸಮವಸ್ತ್ರದಲ್ಲಿ ಪ್ಯಾಂಟ್ ಮತ್ತು ಶರ್ಟ್ ನಿಂದ ವಿನಾಯಿತಿ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.

https://www.suddikanaja.com/2021/04/29/groom-died-due-to-corona/

ಶಿವಮೊಗ್ಗ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಇವರ 2021ರ ಜೂನ್ 6ರ ಜ್ಞಾಪನ ಪತ್ರದ ಅನ್ವಯ ಎಲ್ಲ ಪುರುಷ, ಮಹಿಳಾ ಅಧಿಕಾರಿ, ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಕಡ್ಡಾಯವಾಗಿ ಪೂರ್ಣ ಪ್ರಮಾಣದ ಸಮವಸ್ತ್ರವನ್ನು ಧರಿಸಿ ಕತ್ರ್ಯವ್ಯ ನಿರ್ವಹಿಸುವಂತೆ ಸೂಚಿಸಿರುವುದು ಸಮಪರ್ಕವೇ ಆಗಿರುತ್ತದೆ. ಆದರೆ, ಕೆಲವು ಮಹಿಳಾ ಸಿಬ್ಬಂದಿಗೆ ವಯೋಮಿತಿ ಹಾಗೂ ಮದುವೆ ನಂತರ ಆರೋಗ್ಯದಲ್ಲಿ ಏರುಪೇರು ಆಗುವುದರಿಂದ ಶರ್ಟ್, ಪ್ಯಾಂಟ್ ಧರಿಸುವುದು ಕಷ್ಟವಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

READ | ನೆಹರೂ ರಸ್ತೆಯಲ್ಲಿ ಪಾರ್ಕಿಂಗ್ ಜೋನ್, ದ್ವಿಚಕ್ರ, ಕಾರು ವಾಹನಕ್ಕೆ ಪ್ರತ್ಯೇಕ ವ್ಯವಸ್ಥೆ

ಅಂತಹವರಿಗೆ ಪ್ಯಾಂಟ್ ಮತ್ತು ಶರ್ಟ್ ಧರಿಸಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೇ ತುಂಬ ಮುಜುಗರಪಡುವ ಸ್ಥಿತಿಯುಂಟಾಗುವ ಸಂಭವವಿರುತ್ತದೆ. ಹೀಗಾಗಿ, ಕೆಲವು ವಯೋಮಿತಿಯಲ್ಲಿ ಮತ್ತು ಮದುವೆ ನಂತರದ ದಿನಗಳಲ್ಲಿ ಆರೋಗ್ಯದ ಏರುಪೇರುವಿನಿಂದ ದಪ್ಪಗಾಗಿರುವ ಮಹಿಳಾ ಸಿಬ್ಬಂದಿಗೆ ಸೀರೆಯ ಸಮವಸ್ತ್ರವನ್ನು ಧರಿಸಿ ಕತ್ರ್ಯವವನ್ನು ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್.ಕುಮಾರೇಶ್, ಯುವ ಕಾಂಗ್ರೆಸ್ ಪದಾಧಿಕಾರಿ ಎಂ.ರಾಹುಲ್, ಸಂದೀಪ್ ಮೊದಲಿಯಾರ್, ವಿ.ಶರತ್ ಉಪಸ್ಥಿತರಿದ್ದರು..

https://www.suddikanaja.com/2021/05/24/grand-marriage-stopped-by-official/

error: Content is protected !!