ಗೋಪಿಶೆಟ್ಟಿಕೊಪ್ಪ ಆಶ್ರಯ ಮನೆ ಹಣ ಕಟ್ಟದಿದ್ದರೆ ಕೈ ತಪ್ಪಲಿದೆ ಕನಸಿನ‌ ಮನೆ, ಜುಲೈ 1ರಿಂದ‌ ಅರ್ಜಿ ಹಾಕಲು ಅವಕಾಶ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಗೋಪಿಶೆಟ್ಟಿಕೊಪ್ಪದಲ್ಲಿ 1836 ಜಿ ಪ್ಲಸ್ 2 ಮಾದರಿ ಮನೆಗಳ ನಿರ್ಮಾಣ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ವಂತಿಗೆ ಹಣ ಪಾವತಿಗೆ ಜುಲೈ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

https://www.suddikanaja.com/2021/04/05/gopishettikoppa-invites-you-to-apply-for-shelter-soon/

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಡಿ ಆಯ್ಕೆ ಆಗಿರುವ 2,847 ಫಲಾನುಭವಿಗಳು ಇನ್ನೂ ವಂತಿಗೆ ಹಣ ಪಾವತಿಸಿಲ್ಲ. ಜುಲೈ 1ರಿಂದ ಸೆಪ್ಟಂಬರ್ 30ರ ವರೆಗೆ ಆನ್‌ಲೈನ್‌ನಲ್ಲಿ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಈಗಾಗಲೇ ಆಯ್ಕೆಯಾಗಿದ್ದೂ, ವಂತಿಗೆ ಹಣವನ್ನು ನಿಗದಿತ ಅವಧಿಯ ಒಳಗಾಗಿ ಪಾವತಿಸದಿದ್ದರೆ ಅಂತಹ ಮನೆಗಳನ್ನು ಹೊಸ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಹೇಳಿದರು.
ಪ್ರಸ್ತುತ ಮನೆ ನಿರ್ಮಾಣ ಕಾರ್ಯಕ್ಕಾಗಿ ಟೆಂಡರ್ ಪ್ರಕ್ರಿಯೆ ಕಾರ್ಯ ನಡೆಯುತ್ತಿದೆ. ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಕಳುಹಿಸಿದ ತಕ್ಷಣ ನಿರ್ಮಾಣ ಕಾರ್ಯಗಳಿಗೆ ಚಾಲನೆ ದೊರೆಯಲಿದೆ.

https://www.suddikanaja.com/2020/10/31/money-palanubhavigala/

ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 50 ಸಾವಿರ ರೂ. ಹಾಗೂ ಇತರ ಸಾಮಾನ್ಯ ಫಲಾನುಭವಿಗಳಿಗೆ 80 ಸಾವಿರ ರೂ. ನಿಗದಿಪಡಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1.5ಲಕ್ಷ ರೂ ಹಾಗೂ ವಾಜಪೇಯಿ ವಸತಿ ಯೋಜನೆಯಡಿ 1.2 ಲಕ್ಷ ರೂ. ಸಹಾಯಧನ ಒದಗಿಸಲಾಗುವುದು. ಇನ್ನುಳಿದಂತೆ ಬಾಕಿ ಮೊತ್ತಕ್ಕೆ ಬ್ಯಾಂಕ್ ಸಾಲ ಮತ್ತಿತರ ನೆರವು ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ಮೂರು ಸಾವಿರ ಮನೆಗಳ‌ ನಿರ್ಮಾಣ | ಆಶ್ರಯ ಯೋಜನೆಯಡಿ ಗೋವಿಂದಪುರದಲ್ಲಿ ಜಿ ಪ್ಲಸ್ 2 ಮಾದರಿಯಲ್ಲಿ 3000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಫಲಾನುಭವಿಗಳ ಪಟ್ಟಿ ಕೂಡ ಫೈನಲ್ ಆಗಿದೆ. ಪ್ರಸ್ತುತ ಪ್ರತಿ ಮನೆ ನಿರ್ಮಾಣಕ್ಕೆ 7.70 ಲಕ್ಷ ರೂ. ವೆಚ್ಚ ತಗಲುವ ಅಂದಾಜು ಮಾಡಲಾಗಿದೆ. ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪ ಎರಡು ಯೋಜನೆಗಳಲ್ಲಿ ಒಟ್ಟು 5838 ಫಲಾನುಭವಿಗಳು ಆಯ್ಕೆಯಾಗಿದ್ದು, ಇದರಲ್ಲಿ 2991 ಫಲಾನುಭವಿಗಳಿಂದ ವಂತಿಗೆ ಹಣವನ್ನು ಸ್ವೀಕರಿಸಲಾಗಿದೆ ಎಂದರು.
ಮೇಯರ್ ಸುನಿತಾ ಅಣ್ಣಪ್ಪ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಉಪಸ್ಥಿತರಿದ್ದರು.

https://www.suddikanaja.com/2021/04/05/no-pooja-room-in-model-shelter-homes/

error: Content is protected !!