ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಳೆನಾಡಿನಲ್ಲಿ ಮುಂಗಾರಿನ ಆರ್ಭಟ ಶುರುವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನ ಹೆಬ್ಬಾಗಿಲು ಖ್ಯಾತಿಯ ಶಿವಮೊಗ್ಗದ ವಾತಾವರಣವೇ ಬದಲಾಗಿದೆ. ಅದರಲ್ಲೂ ಮಲೆನಾಡಿನ ತಾಲೂಕುಗಳಾದ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರದಲ್ಲಿ ಉತ್ತಮ ಮಳೆಯಾಗುತ್ತಿದೆ.
ನೆಟ್ವರ್ಕ್ ಸಮಸ್ಯೆ, ಕರೆಂಟ್ ಕಟ್ | ಮಳೆಯಿಂದಾಗಿ ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಜನರು ಪರದಾಡುತ್ತಿದ್ದಾರೆ. ಜತೆಗೆ, ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಕರೆಂಟ್ ಕಡಿತಗೊಂಡು ಸಮಸ್ಯೆಯಾಗಿದೆ.