ಸುದ್ದಿ ಕಣಜ.ಕಾಂ | TALUK | POLITICS
ಶಿವಮೊಗ್ಗ: ತನ್ನ ಭದ್ರಕೋಟೆಯಲ್ಲಿ ಮತ್ತೊಮ್ಮೆ ಜೆಡಿಎಸ್ ಭದ್ರವಾಗಿ ನಿಂತಿದೆ. ಭಾರಿ ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ನಾಗರತ್ನ ಅನಿಲಕುಮಾರ್ ಅವರು 450 ಮತಗಳಿಂದ ಜಯಭೇರಿ ಬಾರಿಸಿದ್ದಾರೆ.
ಕುತೂಹಲಕ್ಕೆ ಕಾರಣವಾಗಿದ್ದ ಭದ್ರಾವತಿ ನಗರಸಭೆ ವಾರ್ಡ್ ಸಂಖ್ಯೆ 29ರ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಯಾವ ಅಭ್ಯರ್ಥಿ ಎಷ್ಟು ಮತ ಪಡೆದರು?
ಜೆಡಿಎಸ್ನ ನಾಗರತ್ನ ಅನಿಲಕುಮಾರ್ ಅವರು 1,282 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ನ ಲೋಹಿತಾ ನಂಜಪ್ಪ 832 ಹಾಗೂ ಬಿಜೆಪಿಯ ರಮಾ ವೆಂಕಟೇಶ್ ಅವರು 70 ಮತಗಳನ್ನು ಪಡೆದಿದ್ದಾರೆ.
29ನೇ ವಾರ್ಡ್ನಲ್ಲಿ ಒಟ್ಟು 3,374 ಮತದಾರರಿದ್ದು, ಅದರಲ್ಲಿ 2,200 ಮತ ಚಲಾವಣೆಯಾಗಿವೆ. ಅದರಲ್ಲಿ 16 ನೋಟಾ ಮತಗಳು ಕೂಡ ಇವೆ.
https://www.suddikanaja.com/2021/04/19/bhadravarhi-muncipal-election-congress-candidate-died/
ನಗರಸಭೆಯ ಬಲಾಬಲ
ಭದ್ರಾವತಿ ನಗರಸಭೆಯಲ್ಲಿ ಒಟ್ಟು 34 ಸ್ಥಾನಗಳಿವೆ. ಅದರಲ್ಲಿ ಕಾಂಗ್ರೆಸ್ 17, ಜೆಡಿಎಸ್ 12, ಬಿಜೆಪಿ 4, ಪಕ್ಷೇತರ 1 ಸದಸ್ಯರಿದ್ದಾರೆ.
ಅಭ್ಯರ್ಥಿ ಸಾವಿನ ಹಿನ್ನೆಲೆಯಲ್ಲಿ ಮರು ಮತದಾನ
ಕಳೆದ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆದಿದ್ದು, ವಾರ್ಡ್ 29ರ ಕಾಂಗ್ರೆಸ್ ಅಭ್ಯರ್ಥಿ ಮೃತಪಟ್ಟಿದ್ದರು. ಹೀಗಾಗಿ, ಚುನಾವಣೆ ಆಯೋಗವು ಚುನಾವಣೆ ಪ್ರಕ್ರಿಯೆ ರದ್ದುಪಡಿಸಿ ಆದೇಶಿಸಿತ್ತು. ಮರು ಚುನಾವಣೆ ಘೋಷಿಸಿದ ಪರಿಣಾಮ ಸೆಪ್ಟೆಂಬರ್ 3ರಂದು ಮತದಾನ ನಡೆದಿತ್ತು. ಶೇ.64.27ರಷ್ಟು ಮತದಾನ ಆಗಿತ್ತು.
https://www.suddikanaja.com/2021/04/05/fraud-in-police-exam/