ಸುದ್ದಿ ಕಣಜ.ಕಾಂ | TALUK | CRIME
ಹೊಸನಗರ: ತಾಲೂಕಿನ ಮಾಸ್ತಿಕಟ್ಟೆ ಬಳಿಯ ಹುಲಿಕಲ್ ನಲ್ಲಿ ಕೋಣಗಳನ್ನು ಸಾಗಿಸುತಿದ್ದ ಕಂಟೇನರ್ ಭಾನುವಾರ ವಶಕ್ಕೆ ಪಡೆಯಲಾಗಿದೆ.
ಅಂದಾಜು ₹3.20 ಲಕ್ಷ ಮೌಲ್ಯದ 32 ಕೋಣಗಳನ್ನು ಜಪ್ತಿ ಮಾಡಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ದಾವಣಗೆರೆಯ ನೆಟ್ಟಿಹಳ್ಳಿ ಗ್ರಾಮದ ಇಮ್ರಾನ್, ಬೆಳಗಾವಿಯ ಮುದ್ದಿಬಸವನ ಗ್ರಾಮದ ಮೊಹಮ್ಮದ್ ಗೌಸ್, ಹರಿಹರ ದ ಗಂಗನರಸಿ ಗ್ರಾಮದ ಮೆಹಬೂಬ್ ಎಂಬುವವರನ್ನು ಬಂಧಿಸಲಾಗಿದೆ.
READ | ದೇವಸ್ಥಾನದ ಹುಂಡಿ ಕದಿಯಲು ಬಂದವನ ಹಿಡಿದು ಕಂಬಕ್ಕೆ ಕಟ್ಟಿಹಾಕಿದ ಗ್ರಾಮಸ್ಥರು!
ದಾಖಲೆಗಳಲ್ಲದೇ ಕೋಣಗಳ ಸಾಗಾಟ
ಕೋಣಗಳನ್ನು ಯಾವುದೇ ಸೂಕ್ತ ದಾಖಲೆಗಳು ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲಾಗುತಿತ್ತು. ಹುಲಿಕಲ್ ನಲ್ಲಿ ವಾಹನ ಪರಿಶೀಲನೆ ಮಾಡಿದಾಗ ಕಂಟೇನರ್ ನಲ್ಲಿ ಕೋಣಗಳಿರುವುದು ಗಮನಕ್ಕೆ ಬಂದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.