ನಾಳೆಯಿಂದ ಖಾಸಗಿ ಬಸ್ ಸಂಚಾರ, ಅಂತರ್ ಜಿಲ್ಲೆ, ಸಿಟಿ ಬಸ್ ಸಂಚಾರ ಹೇಗಿರಲಿದೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಹಿನ್ನೆಲೆ ಕಳೆದ 68 ದಿನಗಳಿಂದ ಸ್ಥಗಿತಗೊಂಡಿರುವ ಖಾಸಗಿ ಬಸ್ ಸಂಚಾರ ಜುಲೈ 1ರಿಂದ ಪುನರಾರಂಭವಾಗಲಿದೆ.

https://www.suddikanaja.com/2021/06/21/ksrtc-bus-operation-started-in-shivamogga/

ಅಂತರ್ ಜಿಲ್ಲಾ ಸಂಚಾರ ಮತ್ತು ನಗರ ಸಾರಿಗೆ ಎರಡೂ ಆರಂಭವಾಗಲಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಬಸ್ ಗಳನ್ನು ರಸ್ತೆಗಿಳಿಸಲಾಗುತ್ತಿಲ್ಲ. ಮೊದಲ ದಿನ ಅಂತರ್ ಜಿಲ್ಲಾ ಸಾರಿಗೆಯ ಶೇ.30 ಹಾಗೂ ನಗರ ಸಾರಿಗೆ ಶೇ.20-25ರಷ್ಟು ಬಸ್ ಗಳನ್ನು ಓಡಿಸಲಾಗುವುದು ಎಂದು ಖಾಸಗಿ ಬಸ್ ಮಾಲೀಕರ ಸಂಘ ತಿಳಿಸಿದೆ.

ಪ್ರಸ್ತುತ ಶಿವಮೊಗ್ಗದಿಂದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿದಂತೆ ನಾನಾ ಜಿಲ್ಲೆಗಳಿಗೆ ಸಂಚರಿಸುವ 600 ಬಸ್ ಗಳಿವೆ. ಆದರೆ, ಎಲ್ಲವನ್ನೂ ಏಕ ಕಾಲಕ್ಕೆ ಆರಂಭಿಸುವುದಿಲ್ಲ. ಪ್ರಯಾಣಿಕರ ಪ್ರತಿಕ್ರಿಯೆಯನ್ನು ಗಮನಿಸಿದ ಬಳಿಕವಷ್ಟೇ ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದೆ.
ಆರ್.ಟಿ.ಒ. ಕಚೇರಿಗೆ ಮುಂಗಡವಾಗಿ ಮೂರು ತಿಂಗಳ ರಸ್ತೆ ತೆರಿಗೆ ಪಾವತಿಸಬೇಕಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ್ದಲ್ಲಿ ಇನ್ನಷ್ಟು ಖಾಸಗಿ ವಾಹನಗಳು ರಸ್ತೆಗಿಳಿಯುವ ಸಾಧ್ಯತೆ ಇದೆ. ಜತೆಗೆ, ಕಳೆದ ಎರಡು ತಿಂಗಳಿಂದ ಬಸ್ ಸಂಚಾರವಿಲ್ಲದೇ ಸಣ್ಣಪುಟ್ಟ ರಿಪೇರಿಗಳು ಇರುವುದರಿಂದ ಜುಲೈ ಮೊದಲ ವಾರದಲ್ಲಿ ಸ್ವಲ್ಪವೇ ಬಸ್ ಸೇವೆ ಸಿಗುವ ಸಾಧ್ಯತೆ ಇದೆ.

error: Content is protected !!