ಶಿವಮೊಗ್ಗ ಮೃಗಾಲಯ ಮಂಗಳವಾರವೂ ಓಪನ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯ ಮತ್ತು ಸಫಾರಿ ಮಂಗಳವಾರವೂ ತೆರೆದಿರಲಿದೆ.‌
ಸಾಮಾನ್ಯವಾಗಿ ಮಂಗಳವಾರದಂದು ಮೃಗಾಲಯಕ್ಕೆ ರಜೆ ಇರುತ್ತದೆ. ಆದರೆ, ಕೋವಿಡ್ ಲಾಕ್ ಡೌನ್ ದಿಂದಾಗಿ ಕಳೆದ ಎರಡು ತಿಂಗಳಿಂದ ಬಂದ್ ಮಾಡಲಾಗಿತ್ತು. ಹೀಗಾಗಿ, ಪ್ರವಾಸಿಗರ ಆಗಮನಕ್ಕೆ ಮಂಗಳವಾರವೂ ಅವಕಾಶ ನೀಡಲಾಗಿದೆ.‌
ಪ್ರವಾಸಿಗರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

error: Content is protected !!