ಭದ್ರಾವತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವನ ಬಂಧನ, ವಿಚಾರಣೆ ವೇಳೆ ಶಾಕ್

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಎಚ್. ಕೆ. ಜಂಕ್ಷನ್ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

READ |ಫ್ರಾನ್ಸ್ ನಲ್ಲಿ ರೆಡಿಯಾಗಿ ಲಂಡನ್‍ನಿಂದ ಶಿವಮೊಗ್ಗಕ್ಕೆ ತರಲಾದ ಬಸವಣ್ಣನ ಪುತ್ಥಳಿ ಅನಾವರಣಗೊಳಿಸಿದ ಯಡಿಯೂರಪ್ಪ, ಪುತ್ಥಳಿಯ ಟಾಪ್ 9 ಪಾಯಿಂಟ್ಸ್ ಇಲ್ಲಿವೆ

ಭದ್ರಾವತಿಯ ಸೀಗೆಬಾಗಿ ನಿವಾಸಿ ರವಿ ಅಲಿಯಾಸ್ ಸೈಕಲ್ ರವಿ (31) ಬಂಧಿತ. ಈತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮಂಗಳೂರಿನಲ್ಲಿ ಮಾಡಲಾದ ಕಳ್ಳತನ ಪ್ರಕರಣದ ವಿಚಾರ ಗೊತ್ತಾಗಿದೆ.
ಜುಲೈ 16ರಂದು ಮಂಗಳೂರು ನಗರದ ವಾಸದ ಮನೆಯೊಂದರಲ್ಲಿ ಕಳ್ಳತನ ಮಾಡಿದ ಅಂದಾಜು 15,50,000 ರೂಪಾಯಿ ಮೌಲ್ಯದ ಒಟ್ಟು 362 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!