ಭದ್ರಾವತಿಯ ರಾಜಕಾಲುವೆಯ ತ್ಯಾಜ್ಯ ತೆಗೆದು ಮಾದರಿ ಕಾರ್ಯ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಧಾರಾಕಾರ ಮಳೆಯಿಂದಾಗಿ ಶನಿವಾರ ತ್ಯಾಜ್ಯ ಸಿಲುಕಿ ನೀರು ಸಲೀಸಾಗಿ ಹರಿಯದಿದ್ದಾಗ ಮುಂದಾದ ಪಿ.ಎಫ್.ಐ., ಎಸ್.ಡಿ.ಪಿ.ಐ. ಸಂಘಟನೆ ಕಾರ್ಯಕರ್ತರು ಕಸವನ್ನು ವಿಲೇ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ವಾರ್ಡ್ ನಂ 7ರ ಖಲಂದರ್ ನಗರದ ರಾಜಕಾಲುವೆಯಲ್ಲಿ ನೀರು ಮುಂದೆ ಸಾಗದೆ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾದ ಕಾರಣ ಕಾರ್ಯಕರ್ತರು ಅಲ್ಲಿಗೆ ಭೇಟಿ ನೀಡಿ ಕಾಲುವೆಯ ಕಸವನ್ನು ತೆಗೆದು ನೀರು ಮುಂದೆ ಸಾಗುವಂತೆ ಮಾಡಿದ್ದಾರೆ.

error: Content is protected !!