ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಕೋವಿಡ್ 19 ರೋಗ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
https://www.suddikanaja.com/2021/05/16/aware-of-black-fungus/
ಎಲ್ಲೆಲ್ಲಿ ಕೇಂದ್ರಗಳಿವೆ | ತುಂಗಾನಗರ ನಗರ ಆರೋಗ್ಯ ಕೇಂದ್ರ, ಬಾಪೂಜಿನಗರ ನಗರ ಆರೋಗ್ಯ ಕೇಂದ್ರ, ವಿದ್ಯಾನಗರ ನಗರ ಆರೋಗ್ಯ ಕೇಂದ್ರ, ಶ್ರೀರಾಂ ನಗರ ನಗರ ಆರೋಗ್ಯ ಕೇಂದ್ರ, ಬೊಮ್ಮನಕಟ್ಟೆ ನಗರ ಆರೋಗ್ಯ ಕೇಂದ್ರ, ಸೀಗೆಹಟ್ಟಿ ನಗರ ಆರೋಗ್ಯ ಕೇಂದ್ರ, ಊರುಗಡೂರು ನಗರ ಆರೋಗ್ಯ ಕೇಂದ್ರ, ಮತ್ತು ಕೋಟೆ ನಗರ ಆರೋಗ್ಯ ಕೇಂದ್ರ (ಸರ್ಕಾರಿ ಉರ್ದು ಶಾಲೆ, ಕೋಟೆ ಏರಿಯಾ)ದಲ್ಲಿ ಕೋವಿಡ್-19 ರೋಗ ಪರೀಕ್ಷಾ ಕೆಂದ್ರಗಳನ್ನು ಸ್ಥಾಪಿಸಲಾಗಿದೆ.