ಮೀನು‌ ಹಿಡಿಯಲು ಹೋದ ವ್ಯಕ್ತಿ ಅಸಹಜ ಸಾವು

 

 

ಸುದ್ದಿ ಕಣಜ.ಕಾಂ
ಸಾಗರ: ಖಾಸಗಿ ಜಾಗದಲ್ಲಿರುವ ಹಳ್ಳವೊಂದರಲ್ಲಿ‌ಮೀನು ಹಿಡಿಯಲು ಹೋದ ವ್ಯಕ್ತಿ ಅಸಹಜವಾಗಿ ಮೃತಪಟ್ಟಿದ್ದು, ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನಗೋಡಿನ ನಾಗರಾಜ್(45) ಎಂಬಾತ ಮೃತಪಟ್ಟಿದ್ದಾರೆ. ಬುಧವಾರ ಬೆಳಗಿನ ಮನೆಯಿಂದ ಹೊರಗಡೆ ಹೋಗಿದ್ದು, ತಡ ರಾತ್ರಿಯಾದರೂ ಮನೆ ಬಾರದ ಕಾರಣ ಹುಡುಕಲಾಗಿ ಖಾಸಗಿ ಹಳ್ಳವೊಂದರಲ್ಲಿ ಶವ ಸಿಕ್ಕಿದೆ. ಕುಟುಂಬದವರು ಅಸಹಜ ಸಾವು ಎಂದು ದೂರು ನೀಡಿದ್ದು, ತನಿಖೆ ನಡೆದಿದೆ.

error: Content is protected !!