HINDU MAHASABHA GANAPTHI | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಶಿವಮೊಗ್ಗ ಸಜ್ಜು, ಎಲ್ಲೆಡೆ ಕೇಸರಿ ಬಾವುಟ

Ganesha

 

 

ಸುದ್ದಿ ಕಣಜ.ಕಾಂ | CITY | 09 SEP 2022
ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಶಿವಮೊಗ್ಗ ಸಜ್ಜಾಗಿದೆ.
ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಕೇಸರಿ ಬಾವುಟ ಮತ್ತು ಬಂಟಿಂಗ್ಸ್’ಗಳನ್ನು ಹಾಕಲಾಗಿದೆ. ಒಟ್ಟಾರೆ, ಇಡೀ ಶಿವಮೊಗ್ಗ ನಗರ ಕೇಸರಿಮಯವಾಗಿದೆ.

VIDEO REPORT 

READ | ಹಿಂದೂ‌ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಶಿವಮೊಗ್ಗದಲ್ಲಿ ಹೈ ಅಲರ್ಟ್, ನಿಯೋಜನೆಗೊಂಡ ಪೊಲೀಸರೆಷ್ಟು?

ಅಮೀರ್ ಅಹಮ್ಮದ್ ವೃತ್ತ, ಬಿ.ಎಚ್.ರಸ್ತೆ, ಅಶೋಕ ವೃತ್ತ, ಗೋಪಿ ವೃತ್ತ, ಕೋರ್ಟ್ ವೃತ್ತ, ಬಾಲರಾಜ್ ಅರಸ್ ರಸ್ತೆಗಳಲ್ಲಿ ಕೇಸರಿ ಬಾವುಟಗಳನ್ನು ಹಾಕಲಾಗಿದೆ. ಗಾಂಧಿಬಜಾರ್ ಉದ್ದಕ್ಕೂ ಕೇಸರಿ ಬಂಟಿಂಗ್ಸ್ ಗಳನ್ನು ಕಟ್ಟಲಾಗಿದೆ.
ಮಹಾಭಾರತ ಸನ್ನಿವೇಶದ ಮಹಾದ್ವಾರ
ಗಾಂಧಿ ಬಜಾರ್’ನಲ್ಲಿ ಮಹಾಭಾರತ ಸನ್ನಿವೇಶದ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿದೆ. ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿದ್ದು, ಜನರು ಇದರ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!