ಸಿಎಂ ತವರು ಕ್ಷೇತ್ರ ಶಿಕಾರಿಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ, ಏನೇನು ಚರ್ಚೆ ಆಯ್ತು?

 

 

ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ಬೇಗೂರು ಮರಡಿ ತಾಂಡದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು.

https://www.suddikanaja.com/2021/03/13/kpcc-president-dk-shivakumar-furious-reaction-to-bjp/

ಲಂಬಾಣಿ ಸಮುದಾಯದವರೊಂದಿಗೆ ಚರ್ಚೆ ನಡೆಸಿದ ಅವರು, ಹಲವು ವರ್ಷಗಳಿಂದ ಸಮುದಾಯದ ಜನ ಎದುರಿಸಿಕೊಂಡು ಬಂದಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹೋರಾಟ ನಡೆಸಲಾಗುವುದು ಎಂಬ ಭರವಸೆ ನೀಡಿದರು.
ಡಿ.ಕೆ.ಶಿ ಹೇಳಿದ್ದೇನು | ತಾಂಡ ವಸತಿ ಪ್ರದೇಶ ಅರಣ್ಯ ಪ್ರದೇಶದಲ್ಲಿಯೇ ಇರುವುದರಿಂದ ಅವುಗಳ ಸಕ್ರಮಗೊಳಿಸುವ ನಿಟ್ಟಿನಲ್ಲಿ ಕಾಯಿದೆಗೆ ತಿದ್ದುಪಡಿ ತರುವ ಸಂಬಂಧ ರಾಜ್ಯದಲ್ಲಿ ಹೋರಾಟ ರೂಪಿಸಲಾಗುವುದು. ಎಂದು ತಿಳಿಸಿದರು.
ಈಗ ಉದ್ಭವಿಸಿರುವ ಸಮಸ್ಯೆಯ ಬಗ್ಗೆ ಪಕ್ಷಕ್ಕೆ ದೂಷಿಸುವ ಬದಲು ಅದರ ಪರಿಹಾರಕ್ಕೆ ಪ್ರಯತ್ನಿಸಬೇಕು. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಾಂಡ ನಿವಾಸಿಗಳಿಗೆ ತಿಳಿಸಿದರು.

ಸಹೋದರನಿಂದ ಸಂಸತ್ತಿನಲ್ಲಿ ಧ್ವನಿ | ಪ್ರಸ್ತುತ ಈಗಿರುವ ಕಾನೂನಿನ ಪ್ರಕಾರ, ಅರಣ್ಯ ಕಾಯಿದೆ ಅಡಿ ಮೂರು ತಲೆಮಾರಿನ ದಾಖಲೆಗಳನ್ನು ನೀಡಬೇಕು. ವಾಸ್ತವದಲ್ಲಿ ಇದುವ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಈ ಅವಧಿಯನ್ನು ಕಡಿಮೆಗೊಳಿಸುವಂತೆ ಸಂಸತ್ತಿನಲ್ಲಿ ಸಂಸದ ಸುರೇಶ್ ಅವರು ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಎಂ.ಎಲ್.ಸಿ ಆರ್.ಪ್ರಸನ್ನಕುಮಾರ್, ಪ್ರಮುಖರಾದ ತಿ.ನಾ.ಶ್ರೀನಿವಾಸ್, ಪ್ರಕಾಶ್, ರುದ್ರಪ್ಪ, ಗೋಣಿ ಮಾಲತೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

https://www.suddikanaja.com/2021/07/02/class-wise-shivamogga-tp-reservation-announced/

error: Content is protected !!