ಸುಳ್ಳು ಜಾತಿ‌ ಪ್ರಮಾಣ‌‌ ಪತ್ರ ಪಡೆದಿದ್ದ ವ್ಯಕ್ತಿ, ಮುಂದೇನಾಯ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮದ ಶೆಲ್ವಕುಮಾರ್ ದೊರೆಸ್ವಾಮಿ ಎಂಬುವವರು ಪರಿಶಿಷ್ಟ ಜಾತಿಗೆ ಸೇರಿರುವುದಿಲ್ಲ ಎಂದು ವರದಿಗಳ ಪ್ರಕಾರ ಕಂಡು ಬಂದಿದ್ದು ಜಾತಿ‌ ಪ್ರಮಾಣ ಪತ್ರವನ್ನು ರದ್ದುಪಡಿಸಿ ಆದೇಶಿಸಲಾಗಿದೆ.

READ | ವೀಕೆಂಡ್ ನಲ್ಲಿ ಜೋಗ ಫುಲ್ ರಷ್, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಟ್ರಾಫಿಕ್‌ ಜಾಮ್

ತೀರ್ಥಹಳ್ಳಿ ತಾಲ್ಲೂಕು ತಹಸೀಲ್ದಾರ್ ಕಚೇರಿಯಿಂದ ಪಡೆದಿರುವ ಪರಿಶಿಷ್ಟ ಜಾತಿಯ ಭೋವಿ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ತೀರ್ಥಹಳ್ಳಿ ತಾಲ್ಲೂಕು ತಹಸೀಲ್ದಾರ್ ಡಾ.ಎಸ್.ಬಿ.ಶ್ರೀಪಾದ್ ಆದೇಶಿಸಿದ್ದಾರೆ.
ಶೆಲ್ವಕುಮಾರ್‌ ಎಂಬಾತ ತೀರ್ಥಹಳ್ಳಿ ತಹಶೀಲ್ದಾರ್ ಕಛೇರಿಯಿಂದ ಪಡೆದಿರುವ ಜಾತಿ ಪ್ರಮಾಣ ಪತ್ರದ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರು ಇವರ ನ್ಯಾಯಾಲಯದ ಆದೇಶದಂತೆ ರದ್ದುಪಡಿಸಿ ಆದೇಶಿಸಲಾಗಿರುತ್ತದೆ.

READ | ಗೋದಾಮಿನಿಂದಲೇ ಅಡಕೆ ಕದ್ದಿದ್ದ ಕಳ್ಳರು ಅರೆಸ್ಟ್, ಸಿಕ್ತು‌ ಏಳು‌ ಕ್ವಿಂಟಾಲ್ ಅಡಕೆ

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ದಾವಣಗೆರೆ ಮತ್ತು ಬೆಂಗಳೂರು ಇವರುಗಳ ವರದಿ, ತೀರ್ಥಹಳ್ಳಿ ತಹಸೀಲ್ದಾರರ ವರದಿ ಮತ್ತು ವಿಚಾರಣೆಯಿಂದ ಶೆಲ್ವಕುಮಾರ್ ಅವರು ಪರಿಶಿಷ್ಟ ಜಾತಿಗೆ ಸೇರಿಲ್ಲದಿರುವುದು ಕಂಡು ಬಂದಿರುವುದರಿಂದ ಇವರ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ಆದೇಶಿಸಲಾಗಿದೆ ಎಂದು ತೀರ್ಥಹಳ್ಳಿ ತಹಸೀಲ್ದಾರ್ ತಿಳಿಸಿದ್ದಾರೆ.

https://www.suddikanaja.com/2020/11/11/cm-formula-does-to-increase-the-punishment-act/

error: Content is protected !!