ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪುಷ್ಯ ಮಳೆಯ ಆರ್ಭಟ ಗುರುವಾರದಿಂದ ಮತ್ತೆ ಜೋರಾಗಿದೆ. ಬುಧವಾರ ಬಿಡುವು ನೀಡಿದ್ದ ಮಳೆ ಇಂದು ಬೆಳಗ್ಗೆಯಿಂದಲೇ ಬಿಟ್ಟೂ ಬಿಡದೆ ಸುರಿಯುತ್ತಿದೆ.
https://www.suddikanaja.com/2021/07/15/rain-in-shivamogga-5/
ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಥಂಡಿ ಹಿಡಿದಿದೆ. ಅದರಲ್ಲೂ ಮಲೆನಾಡಿನ ತಾಲೂಕುಗಳಲ್ಲಿ ವರುಣ ರಚ್ಚೆ ಹಿಡಿದಿದ್ದು, ಬಿಡುವ ನೀಡುವ ಲಕ್ಷಣಗಳೇ ಕಾಣುತ್ತಿಲ್ಲ.
ತಾಲೂಕುವಾರು ಮಳೆ ವಿವರ | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದಲ್ಲಿ 6.80 ಎಂಎಂ, ಭದ್ರಾವತಿ 12.40 ಎಂಎಂ, ತೀರ್ಥಹಳ್ಳಿ 85.60 ಎಂಎಂ, ಸಾಗರ 50.40 ಎಂಎಂ, ಶಿಕಾರಿಪುರ 15.60 ಎಂಎಂ, ಸೊರಬ 20.20 ಎಂಎಂ, ಹೊಸನಗರ 147 ಎಂಎಂನಷ್ಟು ಮಳೆಯಾಗಿದೆ.
https://www.suddikanaja.com/2021/07/20/heavy-rainfall-in-shivamogga-2/