
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಳಗುಪ್ಪ- ಬೆಂಗಳೂರು ರೈಲು (Talaguppa- Bangalore train) ಚಲಿಸುತ್ತಿದ್ದಾಗ ಶಿವಮೊಗ್ಗ- ಭದ್ರಾವತಿ ನಡುವಿನಬಿಳಕಿ (Bilaki) ಬಳಿ ಇಂಜಿನ್ ಬೋಗಿಯಿಂದ ಬೇರ್ಪಟ್ಟಿದ್ದು (bogie detach from engine) ಕೆಲಹೊತ್ತು ಭಾರೀ ಗೊಂದಲಕ್ಕೆ ಕಾರಣವಾಗಿತ್ತು.
READ | ಹೋಟೆಲ್, ಲಾಡ್ಜ್, ಗ್ಯಾರೇಜ್’ಗಳ ಮೇಲೆ ತೀವ್ರ ನಿಗಾ ಇಡಲು ಡಿಸಿ ಸೂಚನೆ, ಕಾರಣವೇನು?
ಸಾಮಾನ್ಯವಾಗಿ ಬೋಗಿಯಿಂದ ಇಂಜಿನ್ ಬೇರ್ಪಡುವುದು ಭಾರೀ ವಿರಳ. ಆದರೆ, ತಾಂತ್ರಿಕ ಕಾರಣದಿಂದಾಗಿ ರೈಲು ಇಂಜಿನ್ ಬೋಗಿಗಳನ್ನು ಹಿಂದೆಯೇ ಬಿಟ್ಟು ಸ್ವಲ್ಪ ದೂರ ಕ್ರಮಿಸಿದೆ.
ಶಿವಮೊಗ್ಗದಿಂದ ಬೆಂಗಳೂರಿಗೆ ಶುಕ್ರವಾರ ಬೆಳಗ್ಗೆ ಹೊರಟಿದ್ದು, ತಾಳಗುಪ್ಪ- ಬೆಂಗಳೂರು ರೈಲಿನ ಬೋಗಿ ದಿಢೀರ್ ಬೇರ್ಪಟ್ಟಿದ್ದು, ಆ ಕ್ಷಣಕ್ಕೆ ಗೊತ್ತಾಗಿಲ್ಲ.ಸ್ವಲ್ಪ ದೂರ ಕ್ರಮಿಸಿದ ಬಳಿಕ ಇಂಜಿನ್ ನಿಧಾನವಾಗಿದೆ. ಬೋಗಿಯೂ ಏಕಾಏಕಿ ವೇಗ ಕಳೆದುಕೊಂಡಿದ್ದಕ್ಕೆ ಜನರೂ ಗಾಬರಿಯಾಗಿದ್ದಾರೆ. ಕೆಲಹೊತ್ತಿನ ಬಳಿಕ ಇಂಜಿನ್ ಬೇರ್ಪಟ್ಟ ವಿವಾರ ಗೊತ್ತಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು
ಇಂಜಿನ್ ಬೇರ್ಪಟ್ಟ ಕಾರಣಕ್ಕೆ ಲೋಕೊ ಮತ್ತು ಸಹಾಯಕ ಲೋಕೊ ಇಬ್ಬರೂ ಸೇರಿ ಇಂಜಿನ್ ನಿಲ್ಲಿಸಿದ್ದಾರೆ. ಬಳಿಕ ಬೋಗಿ ಬಳಿ ಬಂದು ಮರುಜೋಡಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಚಾರ ತಿಳಿದಿದ್ದೇ ರೈಲ್ವೆ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜನರು ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ. ತಾತ್ಕಾಲಿಕವಾವಿ ರಿಪೇರಿ ಮಾಡಿ ಭದ್ರಾವತಿ ರೈಲ್ವೆ ನಿಲ್ದಾಣದವರೆಗೆ ನಿಧಾನವಾಗಿ ಚಲಿಸಿ ಅಲ್ಲಿ ದುರಸ್ತಿ ಮಾಡಲಾಗಿದೆ.
ರೈಲು ಒಂದು ಗಂಟೆ ವಿಳಂಬ
ಇಂಜಿನ್ ಮತ್ತು ಬೋಗಿ ಬೇರ್ಪಟ್ಟಿದ್ದನ್ನು ರಿಪೇರಿ ಮಾಡಿ ಬಿಡುವ ಹೊತ್ತಿಗೆ ರೈಲು ಸುಮಾರು ಒಂದು ಗಂಟೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.
Shimoga DC | ಫೀಲ್ಡಿಗಿಳಿದ ಡಿಸಿ, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್