ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗುರುವಾರ ರಾತ್ರಿ ಹುಣಸೋಡಿನಲ್ಲಿ ಎರಡು ಸಲ ಸ್ಫೋಟವಾಗಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಮೊದಲು ಸಣ್ಣದಾಗಿ ಸ್ಫೋಟದ ಸದ್ದು ಕೇಳಿಬಂದಿದೆ. ನಂತರ, ಮಹಾಸ್ಫೋಟವಾಗಿದೆ.
ಸ್ಫೋಟದ ಭೀಕರತೆಗೆ ಮನೆಯ ತಾರಸಿಗಳು ಅದುರಿದ್ದು, ಗೋಡೆಗಳು ಬಿರುಕು ಬಿಟ್ಟಿವೆ. ಕಾರ್ಮಿಕರ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ರಸ್ತೆಯಲ್ಲೇ ನಿದ್ದೆ: ಭಯದಿಂದ ಗ್ರಾಮಸ್ಥರು ಮನೆಯೊಳಗಡೆ ಮಲಗುವುದಕ್ಕೆ ಭಯಪಟ್ಟು ರಸ್ತೆಯಲ್ಲಿ ನಿದ್ದೆ ಮಾಡಿದ್ದಾರೆ. ಇನ್ನೊಮ್ಮೆ ಸ್ಫೋಟ ಆಗಬಹುದೆಂಬ ಭೀತಿಯಲ್ಲೇ ಇಡೀ ರಾತ್ರಿ ಕಳೆದಿದ್ದಾರೆ. ಈಗಲೂ ಪರಿಸ್ಥಿತಿ ಗಂಭೀರವಾಗಿದೆ. ಮನೆಯಲ್ಲೆಲ್ಲ ಧೂಳು ತುಂಬಿಕೊಂಡಿದೆ. ಮಕ್ಕಳು ಭೀತಿಯಲ್ಲಿದ್ದಾರೆ. ಕೆಲವರಿಗೆ ಜ್ವರ ಕೂಡ ಬಂದಿದೆ.