ಮಳೆಯ ಆರ್ಭಟಕ್ಕೆ ಕುಸಿದ ಮನೆಗಳು, ಧರೆಗುರುಳಿದ ಮರಗಳು, ಜಲಾಶಯಗಳಲ್ಲಿ ಒಳಹರಿವು ಏರಿಕೆ, ತಾಲೂಕುವಾರು ಮಳೆ ವಿವರಕ್ಕಾಗಿ ಕ್ಲಿಕ್ಕಿಸಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಶ್ರುತಿ ಹಿಡಿದು ಸುರಿಯುತಿದ್ದ `ಪುನರ್ವಸು’ ಮಳೆ ಬುಧವಾರದಿಂದ ರುದ್ರ ಸ್ವರೂಪ ಪಡೆದಿದೆ. ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದ್ದು, ಬಿರುಸು ಗಾಳಿಗೆ ಸೂರುಗಳು ಧರೆಗುರುಳಿವೆ.

https://www.suddikanaja.com/2021/06/18/highest-rainfall-in-hosanagara/

ಸಾಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಫ್ರಾನ್ಸಿಸ್ ವರ್ಗೀಸ್ ಎನ್ನುವವರ ಕೊಟ್ಟಿಗೆ ಧರೆಗುರುಳಿದೆ. ಅಬಸೆ ಗ್ರಾಮದ ದುರ್ಗಪ್ಪ ಎಂಬುವವರ ಮನೆಗೆ ಹಾನಿಯಾಗಿದೆ. ಅದೇ ರೀತಿ, ಸಾಗರದ ಹಲವೆಡೆ ಮನೆಗಳಿಗೆ ಹಾನಿ ಉಂಟಾಗಿದೆ.
ಮರಗಳು ಉರುಳಿ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಕಾಡು ಪ್ರದೇಶದಲ್ಲಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಶಿವಮೊಗ್ಗ ನಗರದ ಹಲವೆಡೆ ಬುಧವಾರ ಇಡೀ ರಾತ್ರಿ ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಿಗೆ ನೀರು ಹರಿದು ಬಂದು ಜನರಿಗೆ ತೊಂದರೆ ಆಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ವಾಹನಗಳ ಓಡಾಟಕ್ಕೆ ಭಾರಿ ತೊಂದರೆ ಉಂಟಾಗಿದೆ.

https://www.suddikanaja.com/2021/01/06/rainfall-in-shivamogga-malenadu/

ಜಲಾಶಯಗಳಲ್ಲಿ ನೀರು ಏರಿಕೆ | ಲಿಂಗನಮಕ್ಕಿ ಪ್ರದೇಶದಲ್ಲಿ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಜಲಾಶಯದ ಒಳಹರಿವು 47,808 ಕ್ಯೂಸೆಕ್ಸ್ ಗೆ ಏರಿಕೆಯಾಗಿದೆ. ಭದ್ರಾದಲ್ಲಿ 18,214 ಕ್ಯೂಸೆಕ್ಸ್, ತುಂಗಾದಲ್ಲಿ 29,267 ಕ್ಯೂಸೆಕ್ಸ್ ಒಳಹರಿವು ಇದೆ.
ತಾಲೂಕುವಾರ ಮಳೆ | ಕಳೆದ 24 ಗಂಟೆಗಳಲ್ಲಿ ಶಿಕಾರಿಪುರ, ಭದ್ರಾವತಿ ಹೊರತುಪಡಿಸಿ ಎಲ್ಲ ತಾಲೂಕುಗಳಲ್ಲಿ ಮಳೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 36.80 ಎಂಎಂ, ಭದ್ರಾವತಿ 41.60 ಎಂಎಂ, ತೀರ್ಥಹಳ್ಳಿ 97 ಎಂಎಂ, ಸಾಗರ 75.60 ಎಂಎಂ, ಶಿಕಾರಿಪುರ 21 ಎಂಎಂ, ಸೊರಬ 32.10 ಎಂಎಂ, ಹೊಸನಗರ 210.20 ಎಂಎಂ ಮಳೆಯಾಗಿದೆ.

https://www.suddikanaja.com/2021/05/14/red-alert-in-shivamogga/

error: Content is protected !!