GOOD NEWS | ರಾಜ್ಯದಲ್ಲಿ ಸಪ್ತಪದಿ ಯೋಜನೆ ಪುನರಾರಂಭ, ಮಂಗಳ ಕಾರ್ಯಗಳಿಗೆ ಮುಹೂರ್ತ ಫಿಕ್ಸ್

 

 

ಸುದ್ದಿ ಕಣಜ.ಕಾಂ

ಶಿವಮೊಗ್ಗ: ರಾಜ್ಯದಲ್ಲಿ‌ ಸಪ್ತಪದಿ‌ ಯೋಜನೆ ಪುನರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ‌ ಪ್ರಕಟಿಸಿದರು.

READ | ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆನ್ನಿಗೆ ನಿಂತ ಶಿವಮೊಗ್ಗದ 21 ಮಠಾಧೀಶರು, ಸ್ವಾಮೀಜಿಗಳ ಬೇಡಿಕೆಗಳೇನು?

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಕಾರಣದಿಂದಾಗಿ ತಾತ್ಕಾಲಿಕ ಸ್ಥಗಿತಗೊಂಡಿದ್ದ ಸಪ್ತಪದಿ‌ ಯೋಜನೆ ಪುನರಾರಂಭಿಸಲಾಗುವುದು. ಈಗಾಗಲೇ ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದಲೇ ಸರಳ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.
ಯೋಜನೆ ಅಡಿ‌ ವಿವಾಹ ಆಗುವ ವಧುವಿಗೆ 40,000 ರೂಪಾಯಿ ಮೌಲ್ಯದ ಚಿನ್ನ ನೀಡಲಾಗುವುದು.‌ ಅಲ್ಲದೇ,‌ ವಧುವಿಗೆ 10,000 ರೂ.ಗಳ ನಗದು, ಧಾರೆ ಸೀರೆ, ವರನಿಗೆ 5,000 ರೂ.ಗಳ ನಗದು ಹಣ ನೀಡಲಾಗುವುದು ಎಂದು ಹೇಳಿದರು.

READ | ನೂರೆಂಟು ಪ್ರಶ್ನೆಗಳನ್ನು ಹುಟ್ಟು ಹಾಕಿದ ಯಡಿಯೂರಪ್ಪ ಟ್ವಿಟ್, ಇದು ವಿದಾಯದ ಮುನ್ಸೂಚನೆಯೇ? ಅಭಿಮಾನಿಗಳಿಂದ ಸಂಚಲನ ಮೂಡಿಸುವ ಪ್ರತಿಕ್ರಿಯೆಗಳು

ಮಂಗಳ ಕಾರ್ಯಗಳಿಗೆ ಮುಹೂರ್ತಗಳನ್ನು ನಿಗದಿಪಡಿಸಲಾಗಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ‌ ದೇವಸ್ಥಾ‌ನ‌ದ ಸರ್ವಾಂಗೀಣ ಪ್ರಗತಿಗೆ ಕ್ರಿಯಾ ಯೋಜನೆ ರೂಪಿಸಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಮೇಯರ್  ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಚನ್ನಬಸಪ್ಪ, ಜ್ಞಾನೇಶ್ವರ್ ಉಪಸ್ಥಿತರಿದ್ದರು.

https://www.suddikanaja.com/2021/05/24/grand-marriage-stopped-by-official/

error: Content is protected !!