ತೋಟಗಾರಿಕೆ ಸಿಬ್ಬಂದಿಯೊಬ್ಬರ ಮನೆಗೆ ಕನ್ನ, ಕಳವಾದ ಚಿನ್ನ, ಬೆಳ್ಳಿ ಎಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಸೊರಬ: ತೋಟಗಾರಿಕೆ ಇಲಾಖೆಯ ಸಿಬ್ಬಂದಿಯೊಬ್ಬರ ಮನೆಯಲ್ಲಿ ಕಳ್ಳರು ತನ್ನ ಕೈಚಳಕ ತೋರಿದ್ದು, 55 ಗ್ರಾಂ ಚಿನ್ನ ಹಾಗೂ 2 ಕೆ.ಜಿ. ಬೆಳ್ಳಿ ಕಳವು ಮಾಡಿದ್ದಾರೆ.
ಸೊರಬ ಪಟ್ಟದ ಚಾಮರಾಜಪೇಟೆಯ ನಾಗರಾಜ್ ಎಂಬುವವರ ಮನೆಯಲ್ಲಿ ಕಳವು ಮಾಡಲಾಗಿದೆ. ಯಾರೂ ಮನೆಯಲ್ಲಿ ಇಲ್ಲದಿದ್ದಾಗ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದರು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!