ಗ್ರಾಮೀಣ ಪ್ರದೇಶದ ನೆಟ್ವರ್ಕ್ ಸಮಸ್ಯೆ ಪರಿಹಾರದ ಬಗ್ಗೆ ಅಮೆರಿಕಾದ ಅರೋರ ಇನೋವೇಷನ್ ಕಂಪೆನಿಯ ಡಾ.ಮನೋಹರ್ ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿನ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಅಮೆರಿಕಾದ ಅರೋರ ಇನೊವೇಷನ್  ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಮನೋಹರ ಶ್ರೀಕಾಂತ್ ಕೆಲ ಪರಿಹಾರಗಳನ್ನು ನೀಡಿದ್ದಾರೆ.

https://www.suddikanaja.com/2021/07/13/no-network-no-voting-campaign-in-malenadu/

ನಗರದ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ, ಕೇಂದ್ರದ ಎಐಸಿಟಿಇ ತರಬೇತಿ ಮತ್ತು ಕಲಿಕಾ ಅಕಾಡೆಮಿ ವತಿಯಿಂದ ಆನ್ಲೈನ್ ಮೂಲಕ ಉಪನ್ಯಾಸಕರಿಗಾಗಿ ಮಂಗಳವಾರ ಆಯೋಜನೆ ಮಾಡಲಾಗಿದ್ದ ‘ಕ್ಲೌಡ್ ಅಪ್ಲಿಕೇಷನ್‌ಗಳಿಗಾಗಿ 5ಜಿ ಸಂವಹನ ನೆಟ್ವರ್ಕ್ ಪರಿಣಾಮಕಾರಿ ಬಳಕೆ’ ಐದು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾಮರ್ಥ್ಯ ಹೆಚ್ಚಳಕ್ಕೆ 5ಜಿ ಪೂರಕ | ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ತರಂಗಗಳ ಸಾಮರ್ಥ್ಯ ಹೆಚ್ಚಿಸಲು 5ಜಿ ಸಂವಹನ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.
5ಜಿ ಸಂವಹನದಲ್ಲಿನ ಮೂಲಭೂ ಅಮಶಗಳನ್ನು ಪ್ರಭಾವಶಾಲಿಯಾಗಿ ಕಾರ್ಯರೂಪಕ್ಕೆ ತರುವ ಮೂಲಕ ಲಭ್ಯ ತರಂಗಗಳ ಗುಣಮಟ್ಟ ಹೆಚ್ಚಿಸುವುದು, ಲಭ್ಯತೆಯೇ ಇಲ್ಲದ ಪ್ರದೇಶಗಳಿಗೆ ಅಗತ್ಯ ತರಂಗ ಸೌಲಭ್ಯ ನೀಡಲು ಪರಿಣಾಮಕಾರಿಯಾಗಿ ನಿಲ್ಲಲಿದೆ‌ ಎಂದು ಸಲಹೆ ನೀಡಿದ್ದಾರೆ.
ಬಹು ದತ್ತಾಂಶಗಳ ನಿರ್ವಹಣೆ, ಹೊಸ ರೇಡಿಯೊ ತರಂಗಗಳ ಅಭಿವೃದ್ಧಿಯಂತಹ ಪ್ರಯೋಗಗಳು ಪ್ರತಿಯೊಂದು ಪ್ರದೇಶಗಳಲ್ಲಿನ ತರಂಗಗಳ ಬಳಕೆ ಮತ್ತು ಲಭ್ಯತೆಯನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ಇಂತಹ ಪ್ರಯೋಗಗಳಿಗೆ ಆರ್ಟಿಫಿಶಿಯಲ್ ಇಂಟಲಿಜನ್ಸ್ ತಂತ್ರಜ್ಞಾನ ಸಹಕಾರಿಯಾಗಲಿದೆ. ಇಂದಿನ ದಿನಮಾನದಲ್ಲಿ ಎಐ ರೊಬೊಟಿಕ್ಸ್ ಆಟೊಮೇಷನ್ ಸಾಮಾನ್ಯ ಮಾನವ ಸಹಾಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಎಂ.ಬಿ.ಉಷಾದೇವಿ, ಕಾರ್ಯಾಗಾರ ಸಂಯೋಜಕ ಜಿ.ಮಧುಸೂದನ್, ರಶ್ಮಿ ಹುಲ್ಲುಮನಿ ಉಪಸ್ಥಿತರಿದ್ದರು.

https://www.suddikanaja.com/2021/02/13/solution-to-internet-problems-set-up-broadband-committee/

error: Content is protected !!