Cattle rescue | ಮಾಂಸ ಮಾರಾಟಕ್ಕೆಂದು ತಂದಿದ್ದ ಜಾನುವಾರುಗಳು ವಶಕ್ಕೆ, 2 ಪ್ರತ್ಯೇಕ ಕೇಸ್ ದಾಖಲು

cattle

 

 

ಸುದ್ದಿ ಕಣಜ.ಕಾಂ‌ ಶಿವಮೊಗ್ಗ
SHIVAMOGGA: ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ತಂಡುಗಳು ದಾಳಿ ನಡೆಸಿದ್ದು, 9 ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು, ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಜಾದ್ ನಗರದಲ್ಲಿ ಮಹ್ಮದ್ ಕಲೀಂ ಮತ್ತು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಷ್ಕರ್ ಮೊಹಲ್ಲಾದಲ್ಲಿ ವಾಸಿಂ ಖಾನ್ ಹಾಗೂ ಮಹ್ಮದ್ ಹುಸೇನ್ ಅವರು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ತಂದು ಇಟ್ಟುಕೊಂಡಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದೆ.

READ | ಶಾಕಿಂಗ್ ಸುದ್ದಿ, ಲಾರಿಯಲ್ಲಿ ಸಿಕ್ತು ರಾಶಿ ರಾಶಿ ತವಾ, ಕುಕ್ಕರ್’ಗಳು ಸೀಜ್

ಎಲ್ಲಿ ಎಷ್ಟು ಪ್ರಕರಣಗಳು ದಾಖಲು?
ಕೋಟೆ ಠಾಣೆ ಪಿಐ ಶಿವಪ್ರಸಾದ್ ರಾವ್, ದೊಡ್ಡಪೇಟೆ ಠಾಣೆಯ ಪಿಎಸ್ಐ ವಸಂತ್, ಶಿವಮೊಗ್ಗ ಮಹಾನಗರ ಪಾಲಿಕೆ ಪಶು ವೈದ್ಯಾಧಿಕಾರಿ ರೇಖಾ ಅವರು ಠಾಣೆ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿದೆ‌. ಸ್ಥಳದಲ್ಲಿ 4 ಎಮ್ಮೆ, 4 ಆಕಳು ಮತ್ತು 1 ಹೋರಿ ಕರು ಸೇರಿದಂತೆ ಒಟ್ಟು 9 ಜಾನುವಾರುಗಳನ್ನು ರಕ್ಷಣೆ ಮಾಡಿ, ಆರೋಪಿತರ ವಿರುದ್ಧ THE KARNATAKA PREVENTION OF SLAUGHTER AND PRESERVATION OF CATTLE ACT 2020 ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 1 ಮತ್ತು ಕೋಟೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದೆ.

error: Content is protected !!