
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿರಾಳಕೊಪ್ಪ(shiralakoppa)ದ ಇಬ್ಬರನ್ನು ಆರು ತಿಂಗಳುಗಳ ಕಾಲ ಗಡಿಪಾರು (Deportation) ಮಾಡಿ ಸಾಗರದ ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಅವರು ಆದೇಶಿಸಿದ್ದಾರೆ.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತೆ ಭೇಟಿ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಗಾಂಧಿನಗರದ ಸುನೀಲ್ ಕುಮಾರ(54) ಸುನೀಲ್ ಕುಮಾರ್ ವಿರುದ್ಧ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಈತನನ್ನು ಗದಗ (gadag) ಜಿಲ್ಲೆಗೆ ಹಾಗೂ ಹಳ್ಳೂರು ಕೇರಿಯ ಅಬ್ದುಲ್ ಮುನಾಪ್ ಅಲಿಯಾಸ್ ಮುನ್ನಾ ಅಲಿಯಾಸ್ ಸ್ಟಾರ್ ಮುನ್ನಾ(48) ವಿರುದ್ಧ 10 ಪ್ರಕರಣಗಳು ದಾಖಲಾಗಿವೆ. ಈತನನ್ನು ವಿಜಯಪುರ ಜಿಲ್ಲೆ ಗಡಿಪಾರು ಮಾಡಲಾಗಿದೆ.
ವಿವಿಧ ಚಟುವಟಿಕೆಗಳಲ್ಲಿ ಭಾಗಿ
ಇವರುಗಳು ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೃತ್ಯಗಳಾದ ಓಸಿ/ ಮಟಕಾ ಜೂಜಾಟ ಆಡುವ ಮತ್ತು ಆಡಿಸುವ ಪ್ರವೃತ್ತಿ ಇದ್ದು, ರೌಡಿ ಚಟುವಟಿಕೆಯಲ್ಲೂ ಸಹ ಭಾಗಿಯಾಗಿ ಸಾರ್ವಜನಿಕರ ಆಸ್ತಿ ಮತ್ತು ಜೀವ ಹಾನಿಪಡಿಸುವ ಅಪಾಯವೂ ಇದೆ ಎಂದು ತಿಳಿಸಲಾಗಿದೆ.
ಇಬ್ಬರ ವಿರುದ್ಧವೂ ಪ್ರಕರಣಗಳು ದಾಖಲಾಗಿದ್ದರೂ ಇವರುಗಳ ನಡವಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳದೇ ತಮ್ಮ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದಿರುವುದರಿಂದ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಸುನೀಲ್ ಕುಮಾರ್ ಮತ್ತು ಅಬ್ದುಲ್ ಮುನಾಪ್ ಅವರನ್ನು ಗಡಿಪಾರು ಮಾಡುವಂತೆ ಶಿರಾಳಕೊಪ್ಪ ಪೊಲೀಸ್ ಉಪ ನಿರೀಕ್ಷಕರು ನೀಡಿದ ವರದಿಯ ಮೇರೆಗೆ ಮಾ.7ರಿಂದ ಸೆಪ್ಟೆಂಬರ್ 7ರ ವರೆಗೆ ಆರು ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ.
BREAKING NEWS | ಶಿವಮೊಗ್ಗದಿಂದ ಇಬ್ಬರು ಗಡಿಪಾರು, ಯಾರ್ಯಾರಿಗೆ ಗಡಿಪಾರು ಶಿಕ್ಷೆ?