ಊಟಕ್ಕೆ ಸಾಂಬಾರು ಮಾಡಿಲ್ಲವೆಂದು ತಾಯಿಯನ್ನೇ‌ ಕೊಂದ ಭೂಪ,

 

 

ಸುದ್ದಿ‌ ಕಣಜ.ಕಾಂ
ಚಿತ್ರದುರ್ಗ: ಊಟಕ್ಕೆ ಸಾಂಬಾರ್ ಮಾಡಿಲ್ಲ ಎಂದು ಆಕ್ರೋಶಗೊಂಡ ಮಗನೊಬ್ಬ ಕುಡಿದ ಅಮಲಿನಲ್ಲಿ ತಾಯಿಯನ್ನೆ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ರತ್ನಮ್ಮ‌(45) ಎಂಬುವವರ ಕೊಲೆ ನಡೆದಿದೆ. ಕುಡಿದ‌ ಅಮಲಿನಲ್ಲಿ‌ ನಿತ್ಯ ಜಗಳವಾಡುತಿದ್ದ ಲೋಕೇಶ್ ಎಂಬಾತ ತಾಯಿಯನ್ನೇ‌ ಕೊಲೆ‌ ಮಾಡಿದ್ದಾನೆ.

READ | ಗಾಂಜಾ ಸಾಗಿಸುತ್ತಿದ್ದ 2 ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಅರೆಸ್ಟ್, ಜಪ್ತಿ ಮಾಡಿಕೊಂಡ ಗಾಂಜಾವೆಷ್ಟು?

ಕಳೆದ ರಾತ್ರಿ ಕೂಡ ಕುಡಿದು ಮನೆಗೆ ಬಂದಿದ್ದ ಲೋಕೇಶ್‌ ಕೂಲಿ ಕೆಲಸ ಮುಗಿಸಿಕೊಂಡು ಸುಸ್ತಾಗಿದ್ದ ತಾಯಿ ರತ್ನಮ್ಮ ಅನ್ನ ಮಾಡಿಟ್ಟು ವಿಶ್ರಾಂತಿ ಪಡೆಯುತ್ತಿದ್ದರು.
ಆಗ ಮನೆಗೆ ಬಂದ ಲೋಕೇಶ್ ಸಾಂಬಾರು ಏಕೆ ಮಾಡಿಲ್ಲವೆಂದು ಕ್ಯಾತೆ ತೆಗೆದಿದ್ದಾನೆ.‌ ಬಳಿಕ‌ ತಾಯಿಯ ಕೆನ್ನೆಗೆ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ರತ್ನಮ್ಮ ತಲೆ ಕಬ್ಬಿಣದ ಬಾಗಿಲಿಗೆ ಬಡಿದಿದ್ದಯ, ರಕ್ತಸ್ರಾವಗೊಂಡು ರತ್ನಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

error: Content is protected !!