ಲಿಂಗನಮಕ್ಕಿ‌ ಪಾತ್ರದಲ್ಲಿರುವವರಿಗೆ ಹೈ ಅಲರ್ಟ್, ರಾಜ್ಯದ ಅತಿ‌ ದೊಡ್ಡ ಡ್ಯಾಂನಲ್ಲಿ 19 ಅಡಿ ಬಾಕಿ, ಲಕ್ಷ‌ ಕ್ಯೂಸೆಕ್ಸ್‌ ಗೂ ಅಧಿಕ ಒಳ ಹರಿವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯದ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ, ನೀರಿನ ಮಟ್ಟ ಸತತವಾಗಿ ಏರುತ್ತಿದೆ. ಹೆಚ್ಚುವರಿ ನೀರನ್ನು ಹೊರ ಬಿಡುವ ಸಂಭವವಿದ್ದು ನದಿ ಪಾತ್ರದ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಕೆಪಿಸಿಎಲ್ ಪ್ರಕಟಣೆ ತಿಳಿಸಿದೆ.

https://www.suddikanaja.com/2021/07/23/heavy-rainfall-in-shivamogga-tunga-river-outflow-increase/

ಜಲಾಶಯ ಭರ್ತಿಗೆ 19 ಅಡಿ‌ ಬಾಕಿ‌ | ಜಲಾಶಯದ ಗರಿಷ್ಟ ಮಟ್ಟ 1819.00 ಅಡಿಗಳಾಗಿದ್ದು ಜು.23 ರ ಮಧ್ಯಾಹ್ನ 3 ಗಂಟೆಗೆ ಹೊತ್ತಿಗೆ ಜಲಾಶಯದ ನೀರಿನ ಮಟ್ಟ 1800.90 ಅಡಿಗಳಾಗಿರುತ್ತದೆ. ಈ ದಿನದ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು ಒಂದು ಲಕ್ಷ ಕ್ಯೂಸೆಕ್ಸ್ ಗಳಿಗಿಂತ ಅಧಿಕವಾಗಿದ್ದು, ಇದೇ ರೀತಿಯಲ್ಲಿ ಜಲಾಶಯಕ್ಕೆ ಬರುವ ನೀರಿನ ಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಶೀಘ್ರದಲ್ಲಿ ಗರಿಷ್ಟ ಮಟ್ಟ ತಲುಪುವ ಸಾಧ್ಯತೆ ಇದೆ.
ಆದ್ದರಿಂದ ಅಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರ ಬಿಡಲಾಗುವುದು.
ಆದ್ದರಿಂದ, ಅಣೆಯಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

https://www.suddikanaja.com/2021/07/16/water-from-bhadra-right-and-left-canal/

error: Content is protected !!