ಪೊಲೀಸರ ಭರ್ಜರಿ ಬೇಟೆ, ಮೋಸ್ಟ್ ವಾಂಟೆಡ್ ಬೈಕ್‌ ಕಳ್ಳರ ಸೆರೆ, ವಶಕ್ಕೆ ಪಡೆದ ವಾಹನಗಳೆಷ್ಟು?

 

 

ಸುದ್ದಿ‌ ಕಣಜ.ಕಾಂ | KARNATAKA | CRIME
ಶಿವಮೊಗ್ಗ: ಜಿಲ್ಲಾ ಪೊಲೀಸರ ತಂಡವು ಮೋಸ್ಟ್ ವಾಂಟೆಡ್ ಬೈಕ್ ಕಳ್ಳರ ಗ್ಯಾಂಗ್ ವೊಂದನ್ನು ಬಂಧಿಸಿ, ಅವರಿಂದ ಭಾರಿ ಪ್ರಮಾಣದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದೆ.

bike theft 1
ಸಮೋಸಾ ವ್ಯಾಪಾರಿಯಾದ ಭದ್ರಾವತಿಯ ನೇತಾಜಿ ಆಟೋ ಸ್ಟ್ಯಾಂಡ್ ಸಮೀಪದ ಸುಹೇಲ್ ಪಾಷಾ ಅಲಿಯಾಸ್ ಸುಹೇಲ್ ಖಾನ್ ಅಲಿಯಾಸ್ ಸಮೋಸ ರಾಜ (22), ಶಿವಮೊಗ್ಗದ ಭರಮಪ್ಪ ನಗರದ ಮೊಹ್ಮದ್ ಹ್ಯಾರೀಸ್ (22), ಕಬಾಬ್ ವ್ಯಾಪಾರಿ ಹಳೆ ಮಂಡ್ಲಿ ಅಮೃತ ರೈಸ್ ಮಿಲ್ ಸಮೀಪದ ಫಜಲು ಅಲಿಯಾಸ್ ಚಬಾಜಾ (20),
ಆರ್.ಎಂ.ಎಲ್ ನಗರ‌ ನಿವಾಸಿ ಸಾಹೀಲ್ ಶೇಟ್ (20) ಎಂಬುವವರನ್ನು ಬಂಧಿಸಲಾಗಿದೆ.

https://www.suddikanaja.com/2020/12/18/deer-hunting-in-sharavathi-wildlife-sanctuary-shivamogga/

ಯಾವ ಪೊಲೀಸ್ ಠಾಣೆಯಲ್ಲಿ ಎಷ್ಟು ಕೇಸ್?
ತುಂಗಾನಗರ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ದೊಡ್ಡಪೇಟೆ ಠಾಣೆಯಲ್ಲಿ 5, ವಿನೋಬನಗರ 2, ಜಯನಗರ 2, ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ 1, ಶಿವಮೊಗ್ಗ ಗ್ರಾಮಾಂತರ ಠಾಣೆ 1, ಕುಂಸಿ ಪೊಲೀಸ್ ಠಾಣೆ 1, ಶಿರಾಳಕೊಪ್ಪ 3, ಅಂತರ್ ಜಿಲ್ಲೆಗಳಾದ ದಾವಣೆಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ 2, ಚಿಕ್ಕಮಗಳೂರು ಜಿಲ್ಲೆ ಬೀರೂರು ಪೊಲೀಸ್ ಠಾಣೆಯಲ್ಲಿ 1 ಹಾಗೂ ಕಡೂರು ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 22 ಪ್ರಕರಣಗಳು ಆರೋಪಿಗಳ ವಿರುದ್ಧ ದಾಖಲಾಗಿವೆ.
ಕಳ್ಳತನ ಮಾಡಿದ ಒಟ್ಟು 10,52,450 ರೂಪಾಯಿ ಮೌಲ್ಯದ 22 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

https://www.suddikanaja.com/2021/08/28/most-wanted-accused-arrested-in-shiralakoppa/

ವಿಶೇಷ ತಂಡದ ಕಾರ್ಯಾಚರಣೆ
ಎಸ್.ಪಿ. ಬಿ.ಎಂ.ಲಕ್ಷ್ಮಿಪ್ರಸಾದ್, ಹೆಚ್ಚುವರಿ ಎಸ್.ಪಿ ಎಚ್.ಟಿ.ಶೇಖರ್, ಡಿವೈಎಸ್.ಪಿ ಪ್ರಶಾಂತ್ ಜಿ. ಮುನ್ನೋಳಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಉಪ ವಿಭಾಗದ ವ್ಯಾಪ್ತಿಯಲ್ಲಿ ದಾಖಲಾದ ವಾಹನ ಕಳವು ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ತುಂಗಾನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಎಸ್.ದೀಪಕ್, ಪಿಎಸ್.ಐಗಳಾದ ಈರೇಶ್, ದೂದ್ಯಾನಾಯ್ಕ , ಬಿ.ಎಚ್.ಭಾರತಿ, ಸಿಬ್ಬಂದಿಯಾದ ಟೀಕಪ್ಪ, ಉಮೇಶ್, ಕಿರಣ್ ಮೋರೆ, ಅರುಣ್ ಕುಮಾರ್, ಸಂದೀಪ್, ಕೆ.ಆರ್.ರಾಜು, ಲಂಕೇಶ್ ಕುಮಾರ್, ಅರುಣ್ ಕುಮಾರ್, ಕಾಂತರಾಜ್, ರಾಜೇಶ್ ಗೌಡ ಅವರನ್ನು ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

https://www.suddikanaja.com/2021/01/27/areca-nut-thieves-arrested-in-shivamogga/

error: Content is protected !!