ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಡೆಹರಾಡೂನ್ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು- Rashtriya Indian Military College (RIMC)ನಲ್ಲಿ 8ನೇ ತರಗತಿಗೆ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
READ | ಶಿವಮೊಗ್ಗದಲ್ಲಿ ಆಟೋಗಳಿಗೆ ಕಠಿಣ ರೂಲ್ಸ್ ಫೆ.28ರಂದು ಜಾರಿ, ಉಲ್ಲಂಘಿಸಿದರೆ ಕಠಿಣ ಕ್ರಮ
ಅಭ್ಯರ್ಥಿಗಳು ಹೊಂದಿರಬೇಕಾದ ವಯೋಮಿತಿ
ರಾಜ್ಯದ 11.6 ದಿಂದ 13 ವರ್ಷದೊಳಗಿನ ಬಾಲಕ/ ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಜೂನ್ 3ರಂದು ನಡೆಸಲಾಗುತ್ತಿದೆ.
ಆಸಕ್ತರು ಅರ್ಜಿಯನ್ನು ಏಪ್ರಿಲ್ 15ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಿರ್ದೇಶನಾಲಯದ ದೂ.ಸಂ.: 080-25589459 ಹಾಗೂ ಜಾಲತಾಣ www.rimc.gov.in ನ್ನು ಸಂಪರ್ಕಿಸುವುದು.