ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಲ್ಲಿ ಸಂಚರಿಸುವ ಆಟೋಗಳಿಗೆ ಮತ್ತೊಂದು ಕಠಿಣ ನಿಯಮವನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದ್ದು, ಫೆಬ್ರವರಿ 28ರ ಗಡುವು ನೀಡಲಾಗಿದೆ.
ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಸೋಮವಾರ ಪೊಲೀಸ್ ಇಲಾಖಾ ವತಿಯಿಂದ ನಡೆದ ಆಟೋ ಡಿಸ್ ಪ್ಲೆ ಕಾರ್ಡ್ (Auto Display Card)ಗಳ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.
READ | ಮೇಲ್ದರ್ಜೆಗೇರಲಿವೆ ಶಿವಮೊಗ್ಗದ ಮೂರು ರೈಲ್ವೆ ನಿಲ್ದಾಣಗಳು, ಯಾವ್ಯಾವ ನಿಲ್ದಾಣಗಳು ಆಯ್ಕೆ?
ಆಟೋ ಚಾಲಕರು, ಮಾಲೀಕರಿಗೆ ಖಡಕ್ ಸೂಚನೆ
- ಪ್ರತಿ ಆಟೋಗಳಿಗೆ ಮೀಟರ್ ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.
- ಫೆ.28ರೊಳಗೆ ಪ್ರತಿ ಆಟೋ ಚಾಲಕರು, ಮಾಲೀಕರು ತಮ್ಮ ತಮ್ಮ ಆಟೋಗಳಿಗೆ Auto Display Card ಗಳನ್ನು ಪಡೆದುಕೊಂಡು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಅಂತಹ ಆಟೋ ಚಾಲಕರು/ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಏನಿದು ಆಟೋ ಡಿಸ್ ಪ್ಲೆ ಕಾರ್ಡ್?
Auto Display Card ಗಳಲ್ಲಿ ಆಟೋದ ನೋಂದಣಿ ಸಂಖ್ಯೆ, ಪೊಲೀಸ್ ಕ್ರಮ ಸಂಖ್ಯೆ, ಮಾಲೀಕರ/ ಚಾಲಕರ ಹೆಸರು ವಿಳಾಸ, ಆಟೋ ಬಾಡಿಗೆ ದರ ಮತ್ತು ಕ್ಯೂ ಆರ್ ಕೋಡ್ ನಲ್ಲಿ ಸಂಪೂರ್ಣ ವಿವರಗಳು ಇರುವುದರಿಂದ, ಸಾರ್ವಜನಿಕರಿಗೆ ಪ್ರಯಾಣದ ಸಮಯದಲ್ಲಿ ಅನುಕೂಲವಾಗುತ್ತದೆ.
Auto Display Cardಗಳನ್ನು ಅಳವಡಿಸಿಕೊಳ್ಳುವುದು ಆಟೋ ಚಾಲಕರು ಹಾಗೂ ಮಾಲೀಕರುಗಳ ಕರ್ತವ್ಯವಾಗಿರುತ್ತದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿರುವ *ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು, ಪ್ರತಿಯೊಬ್ಬ ಆಟೋ ಚಾಲಕರುಗಳು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು.
– ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಕಾರ್ಯಕ್ರಮದಲ್ಲಿ ಶಿವಮೊಗ್ಗ ಸಂಚಾರ ವೃತ್ತದ ಸಿಪಿಐ ಜಯಶ್ರೀ ಎಸ್.ಮಾನೆ, ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಶೈಲಜಾ, ನಗರದ ಸಂಚಾರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
https://suddikanaja.com/2023/02/viju-varghese-tour-the-country-on-his-bike/