‘ಡಿ‌.ಕೆ.ಶಿವಕುಮಾರ್ ನನಗೆ ಏಕವಚನದಿಂದ ಕರೆದಿಲ್ಲ, ಇದೆಲ್ಲ ದುಡ್ಡಿನ ಚೀಲ ಹಿಡಿದುಕೊಂಡು ಪಕ್ಷ ಸೇರಿದವರ ಕಿತಾಪತಿ’

 

 

ಸುದ್ದಿ ಕಣಜ.ಕಾಂ‌ | DISTRICT | POLITICS
ಶಿವಮೊಗ್ಗ: ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನನಗೆ ಏಕವಚನದಲ್ಲಿ ಸಂಬೋಧಿಸಿಲ್ಲ. ಇದೆಲ್ಲ ಕೆಲವರ ಸೃಷ್ಠಿ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗುಡುಗಿದರು.

ತೀರ್ಥಹಳ್ಳಿಯಿಂದ ತಮಗೇ ಎಂಎಲ್.ಎ ಸೀಟ್ ಸಿಗಲಿದೆ ಎಂದು ಹೇಳಿಕೊಂಡು ಓಡಾಡುವವರಿಗೆ ಏನೂ ಮಾಡಲಾಗದು. ಅದೆಲ್ಲ ಪಕ್ಷದ ಆಂತರಿಕ ವಿಚಾರ.‌ ಹೈಕಮಾಂಡ್ ನಿರ್ಧಾರವೇ ಅಂತಿಮ.
– ಕಿಮ್ಮನೆ ರತ್ನಾಕರ್, ಮಾಜಿ ಸಚಿವ

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ದುಡ್ಡಿನ ಚೀಲ ಹಿಡಿದು ಪಕ್ಷ ಸೇರಿದ ಕೆಲವರು ತಮಗೆ ಲಾಭ ಆಗಬಹುದು ಎಂದುಕೊಂಡು ಈ ರೀತಿ ಕಿತಾಪತಿ ಮಾಡುತಿದ್ದಾರೆ’ ಎಂದರು.

READ | ರಾಷ್ಟ್ರೀಯ ಶಿಕ್ಷಣ ನೀತಿಗೆ ಮಾಜಿ ಶಿಕ್ಷಣ ಸಚಿವರ ವಿರೋಧ, ಕಾರಣವೇನು?

ಟಿಕೆಟ್ ವಿಚಾರ ಹೈ ಕಮಾಂಡ್ ಗೆ ಬಿಟ್ಟದ್ದು
‘ನಮ್ಮ ತಾತನ ಕಾಲದಿಂದಲೂ ಕಾಂಗ್ರೆಸ್ ನಲ್ಲಿದ್ದೇವೆ. ನನಗೆ ಅಧಿಕಾರದ ಆಸೆ ಇಲ್ಲ. ನಾನೊಬ್ಬ ಸರಳ ರಾಜಕಾರಣಿ. ತೀರ್ಥಹಳ್ಳಿಯಿಂದ ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸಲು ಟಿಕೆಟ್ ನೀಡುವುದು ಬಿಡುವುದು ಹೈಕಮಾಂಡಿಗೆ ಬಿಟ್ಟ ವಿಚಾರ’ ಎಂದು ಹೇಳಿದರು.

error: Content is protected !!