ಮಾಜಿ‌ ಸಿಎಂ ಯಡಿಯೂರಪ್ಪ ಅವರಿಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ, ಇದಕ್ಕಿರುವ ಮಾನದಂಡಗಳೇನು, ಬಿ.ಎಸ್.ವೈ. ಆಯ್ಕೆಗೆ ಕಾರಣಗಳೇನು?

 

 

ಸುದ್ದಿ ಕಣಜ.ಕಾಂ | KARNATAKA | POLITICS
ಬೆಂಗಳೂರು(ವಿಧಾನಸೌಧ): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಇದೇ‌‌ ಮೊದಲ‌ ಸಲ ಪ್ರಶಸ್ತಿಯನ್ನು ನೀಡಲಾಗಿದ್ದು, ಚೊಚ್ಚಲ ಪ್ರಶಸ್ತಿಗೆ ಬಿ.ಎಸ್.ವೈ. ಆಯ್ಕೆ ಆಗಿದ್ದಾರೆ. ವಿಧಾನಸಭೆಯಲ್ಲಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಪ್ರಯುಕ್ತ ಎರಡೂ ಸದನಗಳ‌ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಪ್ರದಾನ ಮಾಡಿದರು. ಈ‌ ಮೂಲಕ ಯಡಿಯೂರಪ್ಪ ಅವರ ಸಾರ್ಥಕ ರಾಜಕೀಯ ಜೀವನಕ್ಕೆ ಗೌರವ ಸಲ್ಲಿಸಿದಂತಾಗಿದೆ.

READ | ಹೆಸ್ಕಾಂನಲ್ಲಿ‌ ಭರ್ಜರಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಕೆ ಹೇಗೆ, ಕೊನೆ ದಿನಾಂಕ ಏನು, ಮಾಹಿತಿಗಾಗಿ ಕ್ಲಿಕ್ಕಿಸಿ

ಕಾಗೇರಿ ಘೋಷಣೆ ಬಳಿಕ‌ ಪ್ರಶಸ್ತಿ ಪ್ರದಾನ
ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಶಸ್ತಿಯನ್ನು ಘೋಷಿಸಿದರು. ಅದಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ನಂತರ, ಓಂ ಬಿರ್ಲಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಬೇರೆಯ ರಾಜ್ಯ ಗಳಲ್ಲಿ ಪ್ರಶಸ್ತಿ ಪದ್ಧತಿ
ಈಗಾಗಲೇ ಅತ್ಯುತ್ತಮ ಶಾಸಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದು ಗುಜರಾತ್, ಜಾರ್ಖಂಡ್, ರಾಜಸ್ಥಾನ, ಉತ್ತರಾಖಂಡ ಸೇರಿದಂತೆ ಹಲವೆಡೆ ಚಾಲ್ತಿಯಲ್ಲಿದೆ. ಇದೊಂದು ಉತ್ತಮ ಬೆಳವಣಿಗೆ ಎಂದು ಓಂ ಬಿರ್ಲಾ ಹೇಳಿದರು.
ಯಡಿಯೂರಪ್ಪ ಅವರು ಉತ್ತಮ ಶಾಸಕರಾಗಿ‌ ಸೇವೆ ಸಲ್ಲಿಸಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಜತೆಗೆ, ಪ್ರಶಸ್ತಿಗಿರುವ ಮಾನದಂಡಗಳಲ್ಲಿ ಅವರು ಎಲ್ಲದ್ದಕ್ಕೂ ಫಿಟ್ ಇದ್ದಾರೆ. ಈ ಕಾರಣಕ್ಕಾಗಿ ಪ್ರಶಸ್ತಿಗೆ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

READ | ಒಬ್ಬರೇ ಇದ್ದಾಗ ತಪ್ಪಿಯೂ ಅಪರಿಚಿತರಿಗೆ ಲಿಫ್ಟ್ ಕೇಳ್ಬೇಡಿ, ಬೈಕ್ ನಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ನಡೀತು ದರೋಡೆ

ಪ್ರಶಸ್ತಿಗಿರುವ ಮಾನದಂಡಗಳು
‘ಅತ್ಯುತ್ತಮ ಶಾಸಕ ಪ್ರಶಸ್ತಿ’ಯನ್ನು ವಿಧಾನಸಭೆಯಲ್ಲೂ‌ ನೀಡುವ ಬಗ್ಗೆ ಜನವರಿಯಲ್ಲಿ‌ ‌‌ನಿರ್ಣಯ ಮಾಡಲಾಗಿತ್ತು. ಆಗ ಯಡಿಯೂರಪ್ಪ ಅವರೇ ಸಿಎಂ ಆಗಿದ್ದರಿಂದ ಸಮಿತಿಯಲ್ಲಿದ್ದರು.‌ ನಂತರ, ನಡೆದ ರಾಜಕೀಯ ಬೆಳವಣಿಗಳಲ್ಲಿ ತಮ್ಮ ಸ್ಥಾನ ಕಳೆದುಕೊಂಡರು.
ಶಾಸಕರು ಮತಕ್ಷೇತ್ರಕ್ಕೆ ನೀಡಿದ ಕೊಡುಗೆ, ಸದನದ ಚರ್ಚೆಗಳಲ್ಲಿ ಭಾಗ ವಹಿಸುವಿಕೆ ಅಲ್ಲಿ ತೋರಿಸಲಾಗುವ ಕೌಶಲ, ವಿಧಾನಸಭೆ ಸದನದ ವೇಳೆ ಪ್ರಸ್ತಾಪಿಸುವ ವಿಚಾರ ಹಾಗೂ ಅದರಲ್ಲಿ‌ಎಷ್ಟು ಗಂಭೀರತೆಯಿಂದ ಭಾಗಿಸುತ್ತಾರೆ, ಕನ್ನಡ ಭಾಷೆಯ ಮೇಲೆ ಅವರಿಗಿರುವ ಹಿಡಿತ ಹೀಗೆ ಹಲವು ಮಾನದಂಡಗಳನ್ನು ಒರೆ ಹಚ್ಚಲಾಗುತ್ತದೆ. ಅದರಲ್ಲಿ‌ ಆಯ್ಕೆ ಆಗುವವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಕರ್ನಾಟಕದಲ್ಲಿ ಇದು ಮೊದಲ ಸಲ ಜಾರಿಗೆ ಬಂದಿದ್ದು, ಮೊಟ್ಟ ಮೊದಲ ಪ್ರಶಸ್ತಿ ಪಡೆದ ಹೆಮ್ಮೆ ಯಡಿಯೂರಪ್ಪ ಅವರದ್ದಾಗಿದೆ.
ಪ್ರಶಸ್ತಿ ಆಯ್ಕೆ ಸಮಿತಿಯ ವಿನ್ಯಾಸ
ವಿಧಾನಸಭೆ ಸ್ಪೀಕರ್ ಆಯ್ಕೆ ಸಮಿತಿಗೆ ಅಧ್ಯಕ್ಷರು. ಅದೇ ರೀತಿ, ಮುಖ್ಯಮಂತ್ರಿ, ವಿಧಾನಸಭೆ ಉಪಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು, ಸಭಾ ಅಧ್ಯಕ್ಷರು ಸಮಿತಿಯಲ್ಲಿರುತ್ತಾರೆ. ಅವರು ನಿರ್ದೇಶಿಸುವ ನಾಮವೇ ಫೈನಲ್ ಆಗಿರುತ್ತದೆ. ಅದರಂತೆ, ಯಡಿಯೂರಪ್ಪ ಹೆಸರು ಆಯ್ಕೆ ಮಾಡಲಾಗಿದೆ.

https://www.suddikanaja.com/2021/09/20/south-indian-international-movie-awards-ceremony-held-at-hyderbad/

error: Content is protected !!