ಅಕ್ಟೋಬರ್‌ 2ರಂದು ಭಟ್ಕಳ- ಸಾಗರ ರಸ್ತೆ ತಡೆ

 

 

ಸುದ್ದಿ‌ ಕಣಜ.ಕಾಂ | TALUK | NO NETWORK
ಕಟ್ಟಿನಕಾರು(ಸಾಗರ): ತಾಲ್ಲೂಕಿನ ಭಾರಂಗಿ ಹೋಬಳಿಯ ನೆಟ್ವರ್ಕ್ ಹೋರಾಟ ಸಮಿತಿಯಿಂದ
ಅಕ್ಟೋಬರ್ 2ರಂದು ಕಟ್ಟಿನಕಾರಿನಲ್ಲಿ ಪ್ರತಿಭಟನಾ ಸಭೆ ನಡೆಸಿ ಪಾದಯಾತ್ರೆಯ ಮೂಲಕ ಕೋಗಾರಿಗೆ ತೆರಳಿ ಭಟ್ಕಳ- ಸಾಗರ ರಸ್ತೆ ತಡೆ ನಡೆಸುವುದಾಗಿ ಹೋರಾಟ ಸಮಿತಿ ತಿಳಿಸಿದೆ.

No network
ನೆಟ್ವರ್ಕ್ ಗಾಗಿ ನಿರ್ಮಿಸಿರುವ ಗುಡಿಸಲು

ಕಳೆದ ಹಲವು ತಿಂಗಳುಗಳಿಂದ ತಾಲ್ಲೂಕಿನಲ್ಲಿ ನೆಡೆಯುತ್ತಿರುವ ‘ನೋ ನೆಟ್ವರ್ಕ್ ನೋ ವೋಟಿಂಗ್’ ಹೋರಾಟ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ನಿರಂತರವಾಗಿ ಹಲವು ಬಾರಿ ಪ್ರತಿಭಟನೆ, ಮನವಿ ಮೂಲಕ ಸಮಿತಿ ಸದಸ್ಯರು ಸರ್ಕಾರಕ್ಕೆ ಎಚ್ಚರಿಸಿದ್ದರರೂ ಯಾವುದೇ ರಚನಾತ್ಮಕ ಕಾರ್ಯಗಳು ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟದ ಮುಂದಿನ ಭಾಗವಾಗಿ ಸಮಿತಿ ಸದಸ್ಯರು ಗ್ರಾಮಸ್ಥರ ಸಮ್ಮುಖದಲ್ಲಿ ಅ.2ರಂದು ಪಾದಯಾತ್ರೆಯ ಮೂಲಕ ಭಟ್ಕಳ – ಸಾಗರ ರಾಜ್ಯ ಹೆದ್ದಾರಿ ರಸ್ತೆ ತಡೆ ನೆಡೆಸಲು ತಿರ್ಮಾನಿಸಿದ್ದಾರೆ.

ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟ ನೆಟ್ವರ್ಕ್ ಸಮಸ್ಯೆ

ತಾಲ್ಲೂಕಿನ ಭಾರಂಗಿ ಹೋಬಳಿಯ ಕೋಗಾರ್, ಕಟ್ಟಿನಕಾರು, ಕಾರಣಿಯ, ಬಿಳಿಗಾರು ಇನ್ನೂ ಹಲವಾರು ಕುಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಈ ಭಾಗದ ಹಲವು ಗ್ರಾಮಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ, ರೈತರು ನಾಡ ಕಚೇರಿ, ಗ್ರಾಮ ಪಂಚಾಯಿತಿಯಲ್ಲಿ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ.
ಈ ಭಾಗದಲ್ಲಿ ಸಾಕಷ್ಟು ಮಹಿಳಾ ಸ್ತ್ರೀ ಶಕ್ತಿ ಹಾಗೂ ಗ್ರಾಮೀಣ ಸಹಕಾರ ಸಂಘಗಳಿದ್ದು ಇವುಗಳ ದಿನನಿತ್ಯದ ನಿರ್ವಹಣೆಗೆ ನೆಟ್ವರ್ಕ್ ಸಮಸ್ಯೆ ತಲೆದೋದೆ. ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಈಗಾಗಲೇ ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದು, ಈ ಭಾಗದ ವಿದ್ಯಾರ್ಥಿಗಳು ಸಾಕಷ್ಟು ಮೂಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಾಲೆಗಳಿಗೆ ತೆರಳಲು 4ರಿಂದ 5 ಕಿ.ಮೀ. ದುರ್ಗಮ ಕಾಡಿನಲ್ಲಿ ಹಾದು ಹೋಗುವ ಪರಿಸ್ಥಿತಿ ಇದೆ. ಇಲ್ಲಿನ ಹಲವು ಕುಟುಂಬಗಳು ಇನ್ನೂ ರಸ್ತೆ, ವಿದ್ಯುತ್ ಸಂಪರ್ಕವನ್ನೇ ಪಡೆದಿಲ್ಲ. ಕನಿಷ್ಠ ಮೂಲ ಸೌಲಭ್ಯ ವಂಚಿತ ಸಾಕಷ್ಟು ಕುಟುಂಬಗಳಿದ್ದು ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕಿದೆ.

ಪ್ರಮುಖವಾಗಿ ನೆಟ್ವರ್ಕ್ ಇಂದಿನ ಅಗತ್ಯ ಸೇವೆಗಳಲ್ಲಿ ಪ್ರಮುಖವಾಗಿದ್ದು, ಈ ಭಾಗದಲ್ಲಿ ಇದು ಗಗನ ಕುಸುಮವಾಗಿದೆ. ಹಲವು ತಿಂಗಳುಗಳಿಂದ ಹೋರಾಟ ಸಮಿತಿಯು ನಿರಂತರವಾಗಿ ಜಿಲ್ಲಾಡಳಿತಕ್ಕೆ ಹಾಗೂ ಸ್ಥಳೀಯ ಶಾಸಕರಿಗೆ ಟವರ್ ನಿರ್ಮಾಣದ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು ಸಹ ಕೇವಲ ಸಭೆಗಳ ಹೊರತು ಇನ್ನೇನೂ ಆಗಿಲ್ಲ.

ಈ ಕಾರಣಕ್ಕಾಗಿ ಪಾದಯಾತ್ರೆ ಮೂಲಕ ರಸ್ತೆ ತಡೆ ನಡೆಸಲಾಗುತ್ತಿದೆ.‌ ಇದಕ್ಕೆ ಸ್ಥಳೀಯ ಮಹಿಳಾ ಸ್ವ ಸಹಾಯ ಸಂಘಗಳು, ಗ್ರಾಮಸ್ಥರು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.

https://www.suddikanaja.com/2020/11/11/cm-formula-does-to-increase-the-punishment-act/

error: Content is protected !!